Publish Date: Wed, 22 Apr 2020 (09:00 IST)
Updated Date: Wed, 22 Apr 2020 (13:59 IST)
ಬೆಂಗಳೂರು: ಲಾಕ್ ಡೌನ್ ಆದ ಮೇಲೆ ಮನೆಯಲ್ಲೇ ಕೂತಿದ್ದೇವೆ. ಪತ್ನಿ ಯಾವಾಗಲೂ ಮನೆ ಕೆಲಸದಲ್ಲೇ ಬ್ಯುಸಿಯಾಗಿರುತ್ತಾಳೆ. ಆದರೆ ನಾನು ಖುಷಿಯಾಗಲು ರೊಮ್ಯಾನ್ಸ್, ಸೆಕ್ಸ್ ಮಾಡಲು ಕರೆದರೂ ಸಿಡುಕುತ್ತಾಳೆ. ಏನು ಮಾಡಲಿ?
ಬಹುಶಃ ಆಕೆಗೆ ಮನೆ ಕೆಲಸದ ಒತ್ತಡದಿಂದಾಗಿ ನೀವು ರೊಮ್ಯಾನ್ಸ್ ಮಾಡಲು ಕರೆದಾಗಲೆಲ್ಲಾ ಸಿಟ್ಟು ಬರುತ್ತಿರಬಹುದು. ಆಕೆಯ ಜತೆ ಕೂತು ಮಾತನಾಡಿ. ಸಾಧ‍್ಯವಾದರೆ ಮನೆ ಕೆಲಸದಲ್ಲಿ ಆಕೆಗೆ ನೆರವಾಗಿ. ಇದರಿಂದ ಆಕೆಯೂ ಹಗುರವಾಗುತ್ತಾಳೆ. ಕೆಲವು ಹೊತ್ತು, ಮನೆ ಕೆಲಸ ಬಿಟ್ಟು ಒಳ್ಳೆಯ ಸಿನಿಮಾ, ಹಾಡು ಜತೆಯಾಗಿ ಕೂತು ನೋಡಿ. ನೀವು ಆರಾಮವಾಗಿರುವಂತೆ ಆಕೆಗೂ ಕೆಲವು ಹೊತ್ತು ಆರಾಮವಾಗಿರಲು ಸಮಯ ಕೊಡಿ. ಇದರಿಂದ ಆಕೆಗೂ ನಿಮ್ಮ ಬಗ್ಗೆ ಯೋಚಿಸಲು ಪುರುಸೊತ್ತು ಸಿಗಬಹುದು.