Publish Date: Tue, 21 Apr 2020 (09:12 IST)
Updated Date: Tue, 21 Apr 2020 (09:13 IST)
ಬೆಂಗಳೂರು: ನನ್ನ ಪತ್ನಿ ಜತೆ ವಾಸ ಮಾಡುತ್ತಿದ್ದರೂ ನಮ್ಮಿಬ್ಬರ ನಡುವೆ ವೈಮನಸ್ಯದಿಂದಾಗಿ ದೈಹಿಕ ಸಂಪರ್ಕವಿರಲಿಲ್ಲ. ಹೀಗಾಗಿ ನಾನು ಇನ್ನೊಬ್ಬಾಕೆಯ ಸಹವಾಸ ಮಾಡಿದ್ದೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ಗೆಳತಿಯನ್ನು ಸೇರಲಾಗುತ್ತಿಲ್ಲ. ಪತ್ನಿ ಅಪರೂಪಕ್ಕೆ ಸಮಾಗಮಕ್ಕೆ ಕರೆಯುತ್ತಿದ್ದಾಳೆ. ಆದರೆ ನನಗೆ ಗೆಳತಿಗೆ ಮೋಸ ಮಾಡಲು ಇಷ್ಟವಿಲ್ಲ. ಏನು ಮಾಡಲಿ?
ನಿಮ್ಮಿಬ್ಬರ ಸಂಬಂಧ ಮುಂದೆ ಸರಿಹೋಗಬಹುದು ಎಂಬ ಭರವಸೆ ನಿಮಗಿದ್ದರೆ ಪತ್ನಿ ಜತೆ ದೈಹಿಕ ಸಂಪರ್ಕವಿಟ್ಟುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಇದರಲ್ಲಿ ಮೋಸದ ಪ್ರಶ್ನೆ ಬರುವುದಿಲ್ಲ. ಮುಂದೆಯೂ ಪತ್ನಿ ಜತೆ ಸಂತೋಷವಾಗಿರುತ್ತೇನೆಂದರೆ ಗೆಳತಿಯನ್ನು ಬಿಡಲೇಬೇಕಾಗುತ್ತದೆ. ಒಂದು ವೇಳೆ ನಿಮಗೆ ಗೆಳತಿಯನ್ನು ಬಿಡಲು ಇಷ್ಟವಿಲ್ಲ ಎಂದಾದರೆ ಪತ್ನಿಗೆ ನಿಮ್ಮ ಈಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಿ. ಆಕೆಗೆ ಆಗಲೂ ನಿಮ್ಮ ಜತೆ ದೈಹಿಕ ಸಂಪರ್ಕ ನಡೆಸುವುದಕ್ಕೆ ತೊಂದರೆಯಿಲ್ಲವೆಂದಾದರೆ ಮುಂದುವರಿಯಿರಿ.