Publish Date: Tue, 10 Mar 2020 (09:15 IST)
Updated Date: Tue, 10 Mar 2020 (09:17 IST)
ಬೆಂಗಳೂರು: ನನ್ನ ಪತಿ ನನ್ನ ಜತೆ ಸದಾ ಜಗಳವಾಡುತ್ತಾರೆ. ಆದರೆ ಅವರಿಗೆ ಇಷ್ಟ ಬಂದಾಗಲೆಲ್ಲಾ ದೈಹಿಕ ಸಂಬಂಧಕ್ಕೆ ಬರುತ್ತಾರೆ. ಆದರೆ ನನಗೆ ಅವರಾಡುವ ಬೈಗುಳ ಮಾತು ನೆನೆಸಿಕೊಂಡರೆ ಮೈಯೆಲ್ಲಾ ಉರಿಯುತ್ತದೆ. ಅವರ ಜತೆ ಲೈಂಗಿಕ ಸಂಬಂಧವೇ ಬೇಡ ಎನಿಸುತ್ತದೆ.
ಇದು ಸಹಜವೇ. ಯಾಕೆಂದರೆ ಲೈಂಗಿಕತೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾನಸಿಕವಾಗಿ ಸಂತೋಷವಾಗಿದ್ದರೆ ಮಾತ್ರ ದೈಹಿಕ ಮಿಲನ ಸಾಧ‍್ಯ. ಹೀಗಾಗಿ ಅವರು ನಿಮ್ಮ ಜತೆಗೆ ಸಮಾಗಮಕ್ಕೆ ಬರುವ ವೇಳೆ ಈ ವಿಚಾರವನ್ನು ನೇರವಾಗಿ ಹೇಳಿ. ಇಲ್ಲವೇ ಅವರ ಆಪ್ತರ ಮೂಲಕ ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ ಹೇಳಿಸಿ. ಇದರಿಂದ ಅವರೂ ಅರ್ಥ ಮಾಡಿಕೊಂಡರೆ ಸರಿ. ಒಂದು ವೇಳೆ ಅವರಿಗೆ ನಿಮ್ಮ ಜತೆ ಲೈಂಗಿಕ ಸಂಬಂಧ ಅನಿವಾರ್ಯ ಎಂದಾದರೆ ನೀವು ಸಹಕರಿಸದೇ ಇದ್ದಾಗ ಸಹಜವಾಗಿಯೇ ಅವರು ದಾರಿಗೆ ಬರುತ್ತಾರೆ!