Publish Date: Wed, 01 Nov 2023 (08:38 IST)
Updated Date: Wed, 01 Nov 2023 (06:39 IST)
ಕಾನ್ಪುರ: ಟ್ಯೂಷನ್ ಶಿಕ್ಷಕಿಯ ಪ್ರಿಯಕರನೇ ವಿದ್ಯಾರ್ಥಿಯನ್ನು ಮೋಸದಿಂದ ಅಪಹರಿಸಿ ಕೊಲೆ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
10 ನೇ ತರಗತಿಯ ವಿದ್ಯಾರ್ಥಿ ಕೊಲೆಗೀಡಾಗಿದ್ದಾನೆ. ಶಿಕ್ಷಕಿಯ ಪ್ರಿಯಕರ ಅಂಗಡಿಯೊಂದಕ್ಕೆ ಶಿಕ್ಷಕಿ ಕರೆಯುತ್ತಿದ್ದಾಳೆ ಎಂದು ಮೋಸದಿಂದ ಕರೆಯಿಸಿಕೊಂಡು ಬಳಿಕ ಕೊಲೆ ಮಾಡಿದ್ದಾನೆ.
ಒಳಗೆ ಹೋಗುವಾಗ ವಿದ್ಯಾರ್ಥಿಯೊಂದಿಗೆ ಆರೋಪಿ ಹೋಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಆದರೆ ಬಳಿಕ ಹೊರಗೆ ಬರುವಾಗ ವಿದ್ಯಾರ್ಥಿ ಜೊತೆಗಿರಲಿಲ್ಲ. ಗಮನ ಬೇರೆಡೆಗೆ ಸೆಳೆಯಲು ಆರೋಪಿ ಬೆದರಿಕೆ ಪತ್ರವೊಂದನ್ನು ಕುಟುಂಬಸ್ಥರಿಗೆ ರವಾನಿಸಿದ್ದ. ಆದರೆ ಪತ್ರ ಮನೆ ತಲುಪುವಷ್ಟರಲ್ಲಿ ವಿದ್ಯಾರ್ಥಿ ಕೊಲೆಗೀಡಾಗಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.