Publish Date: Tue, 31 Oct 2023 (10:17 IST)
Updated Date: Tue, 31 Oct 2023 (10:19 IST)
ಬೆಂಗಳೂರು: ಕೇಸ್ ವಾಪಸ್ ಪಡೆಯಲು ಒಪ್ಪಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಅಸ್ಗರ್ ಎಂಬ ವ್ಯಕ್ತಿ ಕೊಲೆಗೀಡಾದಾತ. ಅಕ್ಟೋಬರ್ 18 ರಂದು ಘಟನೆ ನಡೆದಿತ್ತು. ಕಾರು ಖರೀದಿ ಸಂಬಂಧ ಅಸ್ಗರ್ ನಿಂದ ಆರೋಪಿಗಳು ಹಣ ಪಡೆದಿದ್ದರು. ಹಣ ಮರಳಿಸದೇ ಇದ್ದಾಗ ಇಬ್ಬರ ನಡುವೆ ಜಗಳವಾಗಿದೆ. ಈ ಬಗ್ಗೆ ಅಸ್ಗರ್ ಪೊಲೀಸರಿಗೆ ದೂರು ನೀಡಿದ್ದರು.
ಈ ಕೇಸ್ ವಾಪಸ್ ಪಡೆಯುವಂತೆ ಅಸ್ಗರ್ ಗೆ ಆರೋಪಿಗಳು ಒತ್ತಡ ಹೇರಿದ್ದರು. ಆದರೆ ಆತ ಒಪ್ಪದ ಕಾರಣಕ್ಕೆ ಆರೋಪಿಗಳು ಸ್ಕಾರ್ಪಿಯೋ ಕಾರಿನಲ್ಲಿ ಆತನ ಬೈಕ್ ಹಿಂದಟ್ಟಿ ಆಕ್ಸಿಡೆಂಟ್ ಮಾಡಿಸಿ ಕೊಲೆ ಮಾಡಿದ್ದಾರೆ.