Publish Date: Tuesday, 31 October 2023 (11:34 IST)
Updated Date: Tuesday, 31 October 2023 (09:41 IST)
ಕೋಲಾರ: ಸಂಸಾರ, ಗಂಡನನ್ನು ಬಿಟ್ಟು ಹೋಗಿದ್ದ ಮಹಿಳೆಯ ತವರು ಮನೆಯವರು ಮತ್ತು ಪತಿ ಸೇರಿಕೊಂಡು ಆಕೆಯ ಪ್ರಿಯಕರನನ್ನು ಅಪಹರಿಸಿ, ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮದುವೆಯಾಗಿ ಎರಡು ವರ್ಷ ಪತಿ ಜೊತೆ ಮಹಿಳೆ ಸಂಸಾರ ಮಾಡಿದ್ದಳು. ಆದರೆ ಯಾಕೋ ಇಬ್ಬರ ನಡುವೆ ಎಲ್ಲವೂ ಸರಿ ಹೋಗುತ್ತಿಲ್ಲ ಎಂದಾಗ ಪತ್ನಿ ಹಳೇ ಪ್ರೇಮಿಯ ಜೊತೆಗೆ ಜೀವನ ಮಾಡಲು ಆರಂಭಿಸಿದ್ದಳು. ಇದನ್ನು ಸಹಿಸದ ಪತಿ ಹಾಗೂ ತವರು ಮನೆಯವರು ಮಹಿಳೆ ಜೊತೆಗಿದ್ದ ಪ್ರಿಯಕರನನ್ನು ಕೊಲೆ ಮಾಡಿದ್ದಾರೆ.
ಬೆಂಗಳೂರಿಗೆಂದು ಹೋಗಿದ್ದ ಮನೆ ಮಗನ ಸುಳಿವೇ ಇಲ್ಲದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ವ್ಯಕ್ತಿಯ ಬಟ್ಟೆ-ಬರೆ ಸಿಕ್ಕಿತ್ತು. ಆಗ ಅಪಹರಣ ಮಾಡಿ ಕೊಲೆ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.