ಕಿರಿಯ ಸಹೋದರನ ಪತ್ನಿ ಬೇರೆಯವರೊಂದಿಗೆ ಮಾತನಾಡುತ್ತಿರುವುದರಿಂದ ಕೋಪಗೊಂಡು ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿದ ಘಟನೆ ವರದಿಯಾಗಿದೆ.
ಬಾನುಪ್ರಿಯಾ ಎನ್ನುವ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಚೆನ್ನೈನ ಮಸೂದಿ ಕಾಲೋನಿಯ 11 ನೇ ಬೀದಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಗಂಡನನ್ನು ಕಳೆದುಕೊಂಡ ಬಾನುಪ್ರಿಯಾ ಮತ್ತು ಪತಿಯ ಹಿರಿಯ ಸಹೋದರ ಮಣಿಕಂದನ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ಮಣಿಕಂದನ್‌ಗೆ ಈಗಾಗಲೇ ಮದುವೆಯಾಗಿ ನಂಟಪಕ್ಕಂ ಪ್ರದೇಶದಲ್ಲಿ ವಾಸಿಸುತ್ತಿದ್ದನು.
ಮಣಿಕಂದನ್ ಇಂದು ಬೆಳಿಗ್ಗೆ ಬಾನುಪ್ರಿಯಾ ಮನೆಗೆ ಬಂದಾಗ ಆಕೆ ಬೇರೆ ಪುರುಷನೊಂದಿಗೆ ಮಾತನಾಡುತ್ತಿರುವುದು ನೋಡಿ ಆಕ್ರೋಶಗೊಂಡಿದ್ದಾನೆ. ಬಾನುಪ್ರಿಯಾಗೆ ಪರಪುರುಷನೊಂದಿಗೆ ಯಾಕೆ ಮಾತನಾಡುತ್ತೀಯಾ ಎಂದು ಕೇಳಿದಕ್ಕೆ ಆಕೆ ನಾನು ಯಾರೊಂದಿಗೆ ಬೇಕಾದ್ರೂ ಮಲಗ್ತೇನೆ ಏನ್ ಮಾಡ್ತಿಯಾ ಬಾಯಿಗೆ ಬಂದ ಹಾಗೇ ಬೈದಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಣಿಕಂದನ್ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ. ಬಾನುಪ್ರಿಯಾ ಜೋರಾಗಿ ಕೂಗಿದ ಶಬ್ದ ಕೇಳಿದ ನೆರೆಹೊರೆಯವರು ಧಾವಿಸಿ ತಕ್ಷಣ ಅಲ್ಲಿಗೆ ಬಂದು ಬಾನುಪ್ರಿಯಾಳನ್ನು ಮಣಿಕಂದನ್‌ನಿಂದ ರಕ್ಷಿಸಿದ್ದಾರೆ.
ಬಾನುಪ್ರಿಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆರೋಪಿ ಮಣಿಕಂದನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.