Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಸ್ ನಲ್ಲಿ ಮಹಿಳೆಯರ ಮೇಲಾಗುವ ಕಿರುಕುಳಕ್ಕೆ ಬ್ರೇಕ್ ಹಾಕಲು ಹೊಸ ಕ್ರಮ

ಬಸ್ ನಲ್ಲಿ ಮಹಿಳೆಯರ ಮೇಲಾಗುವ ಕಿರುಕುಳಕ್ಕೆ ಬ್ರೇಕ್ ಹಾಕಲು ಹೊಸ ಕ್ರಮ
ಬೆಂಗಳೂರು , ಶುಕ್ರವಾರ, 28 ಜೂನ್ 2019 (11:45 IST)
ಬೆಂಗಳೂರು : ಬಸ್ ನಲ್ಲಿ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಇದೀಗ ಕೆಎಸ್‍ ಆರ್ ಟಿಸಿ ಬಸ್ ಗಳಲ್ಲಿ ಹೊಸ ಕ್ರಮವೊಂದನ್ನು ಕೈಗೊಳ್ಳಲಾಗಿದೆ.



ಈ ಹಿನ್ನಲೆಯಲ್ಲಿ ಕೆಎಸ್‍ ಆರ್ ಟಿಸಿಯ ರಾತ್ರಿ ಬಸ್ ಗಳಲ್ಲಿ ಒಂದು ವಿಶೇಷ ಪ್ರಕಟಣೆ ಹೊರಡಿಸಿದ್ದು, ಬಸ್‍ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವಂತೆ ಹಾಗೂ ಆಕಸ್ಮಾತ್ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ಅದನ್ನು ಚಾಲಕರು ಮತ್ತು ನಿರ್ವಾಹಕರ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗೇ ಯಾರಾದರೂ ಮಹಿಳೆಯರಿಗೆ ಕಿರುಕುಳ ಕೊಟ್ಟರೆ ಸಹ ಪ್ರಯಾಣಿಕರು ಮಹಿಳೆಯರ ಪರವಾಗಿ ನಿಂತು, ಲೈಂಗಿಕ ಕಿರುಕುಳ ನೀಡುವವರ ಬಗ್ಗೆ ನಿರ್ವಾಹಕರಿಗೆ ತಿಳಿಸುವಂತೆಯೂ ತಿಳಿಸಲಾಯಿತು.


ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇನ್ನುಮುಂದಾದರೂ ಮಹಿಳೆಯರು ನಿರಾಂತಕವಾಗಿ  ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಕೆಲವೊಬ್ಬರು ಮಾತ್ರ ನಮಗೆ ವೋಟ್ ಹಾಕಿದ್ದಾರೆ- ಡಿಸಿಎಂ ಅಸಮಾಧಾನ