Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆಳತಿ ಮನೆಗೆ ಬಾ ಎಂದು ಕರೆದು ಏನ್ ಮಾಡಿದ ಗೊತ್ತಾ?

ಗೆಳತಿ ಮನೆಗೆ ಬಾ ಎಂದು ಕರೆದು ಏನ್ ಮಾಡಿದ ಗೊತ್ತಾ?
ತಿರುಚಿ , ಶುಕ್ರವಾರ, 28 ಜೂನ್ 2019 (19:18 IST)
ತಿರುಚಿ: ಅಪ್ರಾಪ್ತ ಬಾಲಕಿಯನ್ನು ಗರ್ಭವತಿಯಾಗಿಸಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ತಂಜಾವೂರ್‌ನಲ್ಲಿ ನಡೆದಿದೆ.
ಶಾಲೆಯಲ್ಲಿ ಓದುತ್ತಿರುವಾಗ 17 ವರ್ಷದ ಬಾಲಕ 15 ವರ್ಷದ ಬಾಲಕಿಯೊಂದಿಗೆ ಲವ್ ಅಫೇರ್ ಹೊಂದಿದ್ದ.  ನಂತರ ಬಾಲಕ ಶಾಲೆ ತೊರೆದು ಐಟಿಐ ಕೋರ್ಸ್‌ಗೆ ಸೇರಿದ್ದ. ಆದಾಗ್ಯೂ ಬಾಲಕಿಯ ಗೆಳತಿಯ ಮನೆಯಲ್ಲಿ ಪರಸ್ಪರ ಪ್ರೇಮಿಗಳು ಭೇಟಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಗರ್ಭವತಿಯಾಗಿರುವುದನ್ನು ಮುಚ್ಚಿಕೊಳ್ಳಲು ಬಾಲಕಿ ತುಂಬಾ ಪ್ರಯತ್ನಿಸಿದ್ದಾಳೆ. ಆದರೆ, ಕೆಲ ದಿನಗಳ ಹಿಂದೆ ರಹಸ್ಯ ಬಹಿರಂಗವಾಗಿದೆ.
 
ಬಾಲಕಿ ಗರ್ಭ ಧರಿಸಿ 20 ವಾರಗಳ ಅವಧಿ ಪೂರ್ಣಗೊಳಿಸಿದ್ದರಿಂದ ಗರ್ಭಪಾತ ಕೂಡಾ ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
 
ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿ ಜತೆ ಕಾಮಕೇಳಿಯಾಡಿದ 9 ಮಕ್ಕಳ ತಂದೆ; ವಿಡಿಯೋ ವೈರಲ್