Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಣದ ಬತ್ತಿ ಜಾಥ ಮೂಲಕ ಮತದಾನ ಜಾಗೃತಿ

ಮೇಣದ ಬತ್ತಿ ಜಾಥ ಮೂಲಕ ಮತದಾನ ಜಾಗೃತಿ
bangalore , ಭಾನುವಾರ, 7 ಮೇ 2023 (19:10 IST)
ಬಿಬಿಎಂಪಿಯ ಕಂದಾಯ ಅಧಿಕಾರಿ ಹೆಬ್ಬಾಳ ವಿಭಾಗ, ಸಂಜಯ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಡ್ಡಾಯ ಮತದಾನಕ್ಕಾಗಿ ಜಾಗೃತಿ ಮೂಡಿಸಲು ಮೇಣದ ಬತ್ತಿ   ಬೆಳಗಿಸುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ವಲಯ ಆಯುಕ್ತರಾದ ರವೀಂದ್ರ ಪಿ.ಎನ್, ಅಪರ ಜಿಲ್ಲಾ ಚುನಾವಣಾಧಿಕಾರಿ(ಉತ್ತರ) ಮತ್ತು ಜಂಟಿ ಆಯುಕ್ತರು(ಮಹದೇವಪುರ) ಲಿಂಗಮೂರ್ತಿ,  ಪೂರ್ವ ಜಂಟಿ ಆಯುಕ್ತರಾದ ಪಲ್ಲವಿ ಕೆ.ಆರ್, ಚುನಾವಣೆ ಅಧಿಕಾರಿಗಳಾದ ಪ್ರಸನ್ನ ಕುಮಾರ್ ರವರು ಚಾಲನೆ ನೀಡಿದರು.
 
ಬೆಂಗಳೂರುನಗರ ಪ್ರದೇಶದಲ್ಲಿ ಹಿಂದಿನ ಚುನಾವಣೆಯಲ್ಲಿ ಮತದಾನ ಸಂಖ್ಯೆ ಬಹಳ ಕಡಿಮೆಯಾಗಿತ್ತು. ಡಾಲರ್ಸ್ ಕಾಲೋನಿಯಲ್ಲಿ ಕಳೆದ ಬಾರಿ ಶೇಕಡ 38 ರಷ್ಟು ಮಾತ್ರ ಮತದಾನವಾಗಿತ್ತು ಅದರಿಂದ ಮತದಾರರ ಮನಸ್ಸು ಬದಲಾಗಬೇಕು.
 
ನಗರ ಮತದಾರರು ಮನೆಯಿಂದ ಹೊರಬಂದು ಮತದಾನ ಮಾಡಬೇಕು, ಅವರ ಮತದಾನ ಮನಸ್ಸು ಮಾಡಬೇಕು ಎಂದು ಮೇಣಬತ್ತಿ ದೀಪ ಬೆಳಗಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
 
ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕುನ್ನು ಪ್ರತಿಯೊಬ್ಬರು ಚಲಾಯಿಸಬೇಕು ಮತ್ತು ಮೇ 10 ರಜಾ ಎಂದು ಪ್ರವಾಸಕ್ಕೆ ಹೋಗದೇ ಕಡ್ಡಾಯವಾಗಿ ಮತದಾನ ಮಾಡಿ. ಮೊಬೈಲ್ ಆಪ್ ಮೂಲಕ ನಿಮ್ಮ ಎಲ್ಲಿದೆ ಮತ್ತು ಚುನಾವಣೆಯಲ್ಲಿ ಅಭ್ಯರ್ಥಿ ಅಕ್ರಮ ಮಾಡಿದರೆ ಸಿ.ವಿಜಿಲ್ ನಲ್ಲಿ ದೂರು ದಾಖಲು ಮಾಡಬಹುದು.
 
ಭಾರತ ಚುನಾವಣೆ ಆಯೋಗ ಮತ್ತು ಬಿಬಿಎಂಪಿ ಸಹಯೋಗ ಭಯಮುಕ್ತ ಮತ್ತು ನಿರ್ಭಿತಿಯಿಂದ ಮತದಾನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮೇ 10 ಮತದಾನ ಮಾಡಿ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಆಯ್ಕೆ ಮಾಡಿ ಕ್ಯಾಂಡಲ್ ಲೈಟ್ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
 
ಡಾಲರ್ಸ್ ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ಕ್ಯಾಂಡಲ್ ಲೈಟ್ ಜಾಥ ಸಾಗಿತು ಮತ್ತು ಕೀಲು ಕುದುರೆ ಮತ್ತು ತಮಟೆ ವಾದ್ಯ, ಗೊಂಬೆಗಳ ನೃತ್ಯ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
 
ವಿಶೇಷ ಆಹ್ವಾನಿತರಾಗಿ ಹೆಬ್ಬಾಳ ವಿಭಾಗದ ಕಂದಾಯ ಅಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ಆರ್.ಟಿ.ನಗರದ   ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್, ಎಸ್.ಜಿ.ಸಿ.ಇ ಯ ಪ್ರಾಂಶುಪಾಲರಾದ ಆರ್.ಲತಾ ಕುಮಾರಿ, ಹೆಬ್ಬಾಳ ವಿಭಾಗದ ಆರೋಗ್ಯ ಅಧಿಕಾರಿಗಳಾದ ಡಾ.ನಯನತಾರ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ  ಅಭಿಯಂತರರಾದ(ಘನತ್ಯಾಜ್ಯ) ಶ್ರೀ ರುದ್ರಮುನಿ, ಸಹಾಯ ಕಂದಾಯ ಅಧಿಕಾರಿಗಳು ಹಾಗೂ ಸ್ವೀಪ್ ಉಸ್ತುವಾರಿಗಳಾದ ಬಿ.ಟಿ.ಶಿವಕುಮಾರ್, ಹೆಬ್ಬಾಳ ವಿಭಾಗದ ಸಹ ಕಂದಾಯ ಅಧಿಕಾರಿಗಳಾದ ಶ್ರೀ ನಿರಂಜನ್, ಸಹಾಯಕ ಕಂದಾಯ ಅಧಿಕಾರಿಗಳಾದ ಮುಯಿಬ್ ಉಲ್ಲಾ, ಬಿಬಿಎಂಪಿ ನೌಕರರು ಮತ್ತು ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರ್ಕಾರದ ವಿರುದ್ಧ ಎಂ ಕೃಷ್ಣಪ್ಪ ಕಿಡಿ