Publish Date: Sun, 07 May 2023 (18:20 IST)
Updated Date: Sun, 07 May 2023 (17:45 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದಾರೆ.. ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ್ದಾರೆ.. ಧೀರಜ್ ಮುನಿರಾಜು ಪರ ಮತ ಹಾಕುವಂತೆ ಕಿಚ್ಚ ಮತಯಾಚನೆ ಮಾಡಿದ್ದಾರೆ.. ರೋಡ್ ಶೋನಲ್ಲಿ ಧೀರಜ್ ಮುನಿರಾಜು, ಸಚಿವ ಡಾ. ಕೆ. ಸುಧಾಕರ್ ಭಾಗಿಯಾಗಿದ್ರು.. ಕಿಚ್ಚನನ್ನು ನೋಡಲು ಸಾವಿರಾರು ಕಾರ್ಯಕರ್ತರು ಆಗಮಿಸಿದ್ರು. ಕ್ಷೇತ್ರದಾದ್ಯಂತ ಧೀರಜ್ ಮುನಿರಾಜ್ ಪರ ಅಲೆ ಎದ್ದಿದ್ದು, ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.