Publish Date: Sun, 07 May 2023 (17:46 IST)
Updated Date: Sun, 07 May 2023 (17:47 IST)
ಚಿಕ್ಕಬಳ್ಳಾಪುರದ ಹೈವೋಲ್ಟೇಜ್ ಕ್ಷೇತ್ರವಾಗಿರುವ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಸೀಕಲ್ ರಾಮಚಂದ್ರಗೆ ಇನ್ನಷ್ಟು ಬಲ ತುಂಬಲು ನಟ ಕಿಚ್ಚ ಸುದೀಪ್ ಇಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಬರ್ತಿದ್ದು, ಸೀಕಲ್ ರಾಮಚಂದ್ರ ಗೌಡ ಪರ ಕ್ಯಾಂಪೇನ್ ಮಾಡಲಿದ್ದಾರೆ. ರೋಡ್ ಶೋನಲ್ಲಿ ನಟ ಕಿಚ್ಚ ಸುದೀಪ್ಗೆ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಸೇರಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಸೀಕಲ್ ರಾಮಚಂದ್ರಗೌಡರು ಹೋದಲ್ಲೆಲ್ಲಾ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುವ ಭರವಸೆಯಲ್ಲಿ ಉತ್ಸುಕರಾಗಿ ಪ್ರಚಾರ ನಡೆಸುತ್ತಿದ್ದಾರೆ.. ಇಷ್ಟೇ ಅಲ್ಲದೆ ಸೀಕಲ್ ರಾಮಚಂದ್ರಗೌಡ ಆರ್ ಚಂದ್ರು ನಿರ್ದೇಶನದ ಕಬ್ಜ-2 ಚಿತ್ರವನ್ನು ಪ್ರೆಸೆಂಟ್ ಮಾಡಲಿದ್ದಾರೆ.