Publish Date: Sun, 07 May 2023 (18:00 IST)
Updated Date: Sun, 07 May 2023 (17:39 IST)
ತುಮಕೂರಿನ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಭರ್ಜರಿ ಪ್ರಚಾರ ಮಾಡಿದ್ದಾರೆ.. ಪ್ರಚಾರದ ವೇಳೆ ಮಾತನಾಡಿದ ಅವರು, ಮಧುಗಿರಿ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯ ನನ್ನ ಜೊತೆಯಿದೆ.. ನನಗೆ ಈ ಬಾರೀ ಆಶೀರ್ವಾದ ಮಾಡಲಿದ್ದಾರೆ ಎಂದರು.. ಇನ್ನು ಬಿಜೆಪಿಯವರಿಗೆ ಇಂದು ಲಿಂಗಾಯತ ಸಮುದಾಯದ ಅವಶ್ಯಕತೆ ಇಲ್ಲ ಎಂದು ಅವರದೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳ್ತಾ ಇದ್ದಾರೆ.. ಮಾಜಿ ಸಿಎಂ ಯಡಿಯೂರಪ್ಪನಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ರು.. ಅವರ ಕಣ್ಣೀರಲ್ಲೇ ಬಿಜೆಪಿ ಪಕ್ಷ ಕೊಚ್ಚಿ ಹೋಗುತ್ತೆ, ಅಲ್ಲದೇ ಜೆಡಿಎಸ್ ಅವರು ಯಡಿಯೂರಪ್ಪನಿಗೆ 20 ತಿಂಗಳ ಅಧಿಕಾರ ಕೊಡದೇ ವಚನ ಭ್ರಷ್ಟ ಅನ್ನಿಸಿಕೊಂಡಿದ್ದಾರೆ.. ಹಾಗಾಗಿ ಈ ಬಾರಿ ವೀರಶೈವ ಲಿಂಗಾಯತ ಸಮುದಾಯ ನಮ್ಮ ಪರವಾಗಿದ್ದಾರೆ ಎಂದು ಹೇಳಿದ್ರು.