Publish Date: Wed, 22 Jul 2020 (12:10 IST)
Updated Date: Wed, 22 Jul 2020 (12:11 IST)
ಬೆಂಗಳೂರು: ಬೆಂಗಳೂರಿನಲ್ಲಿ ಒಂದು ವಾರಗಳ ಲಾಕ್ ಡೌನ್ ಇಂದು ಬೆಳಿಗ್ಗೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇಷ್ಟು ದಿನ ಮನೆಯಲ್ಲಿದ್ದ ಜನರು ಈಗ ಮನೆಯಿಂದ ಒಮ್ಮೆಲೆ ಹೊರಬಂದಿದ್ದಾರೆ.
ಅದರಲ್ಲೂ ವಿಶೇಷವಾಗಿ ಬೆಳಿಗ್ಗೆಯಿಂದಲೇ ನಗರದ ದೇವಾಲಯಗಳಲ್ಲಿ ಹೆಚ್ಚಿನ ಜನ ದಟ್ಟಣೆ ಕಂಡುಬಂದಿದೆ. ನಾಡಿಗೇ ಕೊರೋನಾ ರೂಪದಲ್ಲಿ ಕಂಟಕ ಬಂದಿದ್ದು, ಭಕ್ತರು ದೇವರಿಗೆ ಕಷ್ಟ ಪರಿಹಾರ ಮಾಡಲು ದೇವಾಲಯಗಳಲ್ಲಿ ಸೇರಿದ್ದಾರೆ. ಆದರೆ ಈ ರೀತಿ ವಿಪರೀತ ಜನದಟ್ಟಣೆಯೂ ಅಪಾಯಕಾರಿ ಎಂಬುದನ್ನು ಮರೆಯಬಾರದು.