Publish Date: Tue, 21 Jul 2020 (14:03 IST)
Updated Date: Tue, 21 Jul 2020 (14:07 IST)
ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಹೊಸ ಹೊಸ ಕ್ರಮಗಳನ್ನು ಜಾರಿಗೆ ತರಲು ಯತ್ನಿಸುತ್ತಿದೆ.
ಜನರಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುವುದು, ಜಾಗೃತಿ ಮೂಡಿಸುವುದು, ಎಚ್ಚರಿಕೆ ನೀಡುವುದು, ಸರಕಾರಿ ನಿಯಮಗಳ ಪಾಲನೆ ಮಾಡುವಂತೆ ಜನರ ಮನ ಒಲಿಸುವ ಕೆಲಸವನ್ನು ಬಿಬಿಬಿಎಂಪಿ ಮಾಡಲಿದೆ. ಇದಕ್ಕಾಗಿ ತನ್ನ ಕೊರೋನಾ ಜಾಗೃತಿ ಕಾರ್ಯಕ್ರಮಕ್ಕೆ ಜನಪ್ರಿಯ ನಟ ರಮೇಶ್ ಅರವಿಂದ್ ರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ರಮೇಶ್ ಜನರಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಬಿಬಿಎಂಪಿ ಕಾಯಕಕ್ಕೆ ಕೈ ಜೋಡಿಸಲಿದ್ದಾರೆ.