ಬೆಂಗಳೂರು: ಕರು ಸತ್ತರೂ ಸೆಗಣಿ ನಾಥ ತಪ್ಪಲಿಲ್ಲ ಎಂಬಂತೆ ಕೊರೋನಾ ತೊಲಗಿದರೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಜನರಿಗೆ ನಿರಂತರವಾಗಿ ಕಾಡಲಿದೆ. ಅದರಲ್ಲಿ ಮಧುಮೇಹವೂ ಒಂದು.
ಇದುವರೆಗೆ ಮಧುಮೇಹ ರೋಗವೇ ಇಲ್ಲದಿದ್ದವರಿಗೂ ಕೊರೋನಾ ಬಂದ ಬಳಿಕ ರಕ್ತದೊತ್ತಡ ವಿಪರೀತ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ ಮಧುಮೇಹ ಇರುವವರಿಗೆ ಮಾತ್ರವಲ್ಲ, ಇಲ್ಲದೇ ಇರುವವರಿಗೂ ಅಪಾಯಕಾರಿ. ಇಂತಹ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವುದೂ ವೈದ್ಯರ ಸವಾಲಾಗುತ್ತಿದೆ.
ಚೀನಾದಲ್ಲೂ ಇಂತಹದ್ದೇ ಪ್ರಕರಣಗಳು ಕಂಡುಬಂದಿವೆ. ರಕ್ತದೊತ್ತಡ, ಬೊಜ್ಜು, ಅಸಾಮಾನ್ಯ ಕೊಬ್ಬಿನ ಸಮಸ್ಯೆಯಿರುವವರಿಗೆ ಮಧುಮೇಹ ಅಸಾಮಾನ್ಯವಾಗಿ ಏರಿಕೆಯಾಗುವ ಅಪಾಯ ಹೆಚ್ಚು ಎಂದು ವೈದ್ಯರು ತಿಳಿಸಿದ್ದಾರೆ.