Publish Date: Tue, 21 Jul 2020 (13:25 IST)
Updated Date: Tue, 21 Jul 2020 (13:27 IST)
ಮಂಗಳೂರು: ಕೆಲವೊಂದು ದೇವಾಲಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಹರಕೆಗಳನ್ನು ತೀರಿಸಲಾಗುತ್ತದೆ. ಆದರೆ ಕುಂದಾಪುರದ ಗುಡ್ಡದಾಟು ವಿನಾಯಕ ದೇವಾಲಯದಲ್ಲಿ ನೀರಿನ ಹರಕೆ ಸಲ್ಲಿಸಿದರೆ ಸಾಕು!
ಇಲ್ಲಿ ಪ್ರತಿನ್ಯ ಗಣಪತಿ ದೇವರಿಗೆ 1000 ಕೊಡಗಳ ನೀರಿನ ಅಭಿಷೇಕ ಮಾಡಲಾಗುತ್ತದೆ. ಅದೂ ನೀರನ್ನು ದೇವಾಲಯದ ಆವರಣದೊಳಗಿನ ಬಾವಿಯಿಂದ ಸೇದಿ ಅಭಿಷೇಕ ಮಾಡಲಾಗುತ್ತದೆ. ಈ ವಿಶಿಷ್ಟ ಹರಕೆ ತೀರಿಸಲು ಭಕ್ತಾದಿಗಳು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಈ ರೀತಿ ಗಣಪತಿಗೆ ಅಭಿಷೇಕ ಮಾಡಿದ ನೀರನ್ನು ಮರುದಿನ ನೈವೇದ್ಯಕ್ಕೆ ಬಳಸಲಾಗುತ್ತದೆ. ಈ ರೀತಿ ಮಾಡುವುದರಿಂದ ಗಣಪತಿ ಇಷ್ಟಾರ್ಥ ಪೂರೈಸುತ್ತಾನೆ ಎಂಬುದು ಇಲ್ಲಿನವರ ನಂಬಿಕೆ.