Publish Date: Mon, 04 May 2020 (19:40 IST)
Updated Date: Mon, 04 May 2020 (19:42 IST)
ಕೊರೋನಾ ಸೋಂಕಿನಿಂದ ಗುಣಮುಖರಾದ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಕಲಬುರಗಿ ನಗರದ ಇಬ್ಬರು ಮತ್ತು ಶಹಾಬಾದ ಪಟ್ಟಣದ ಓರ್ವ ಬಾಲಕ ಸೇರಿದಂತೆ ಮೂವರು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿ ನಗರದ ಖಾದ್ರಿ ಚೌಕ್ ಪ್ರದೇಶದ 34 ವರ್ಷದ ಯುವಕ (ರೋಗಿ ಸಂಖ್ಯೆ-360), ಮೋಮಿನಪುರ ಪ್ರದೇಶದ 30 ವರ್ಷದ ಯುವತಿ (ರೋಗಿ ಸಂಖ್ಯೆ-393) ಹಾಗೂ ಶಹಾಬಾದ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ 16 ವರ್ಷದ ಬಾಲಕ(ರೋಗಿ ಸಂಖ್ಯೆ-361) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರಾಗಿದ್ದಾರೆ.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 63 ಜನರಲ್ಲಿ ಒಟ್ಟು 21 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.