ದೇಶದಲ್ಲಿ ಕೊರೊನಾ ವೈರಸ್ ಗೆ ಮೊದಲ ಸಾವು ಕಂಡಿರುವ ಕಲಬುರಗಿಯಲ್ಲಿ ಡೆಡ್ಲಿ ಕೊರೊನಾಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ.
ಕೊರೊನಾ ಸೋಂಕಿತ ಕಲಬುರಗಿ ನಗರದ ಸರಾಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 56 ವರ್ಷದ ವ್ಯಕ್ತಿ (P-587) ಸಾವನ್ನಪ್ಪಿದ್ದಾರೆ.
ಈ ವ್ಯಕ್ತಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಏಪ್ರಿಲ್ 29 ರಂದು ಕಲಬುರಗಿ ಕೋವಿಡ್-19 ಆಸ್ಪತೆಯಲ್ಲಿ ದಾಖಲಾಗಿದ್ದರು. ಮೇ-1 ರಂದು ಕೋವಿಡ್-19 ದೃಢವಾಗಿತ್ತು.