Select Your Language

Notifications

webdunia
webdunia
webdunia
webdunia

ಈ ಜಿಲ್ಲೆಯ ಕುಡುಕರಿಗೆ ಇಲ್ಲ ಎಣ್ಣೆ ಭಾಗ್ಯ

ಮದ್ಯ ಮಾರಾಟ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಿಂದಾಗಿ ಮದ್ಯಪ್ರಿಯರಿಗೆ ಎಣ್ಣೆ ಭಾಗ್ಯ ಸಿಕ್ಕಿದೆ. ಆದರೆ ಮದ್ಯಕ್ಕಾಗಿ ಮದ್ಯರಾತ್ರಿಯಿಂದ ಕಾದವರು ಇಲ್ಲಿ ನಿರಾಸೆಗೆ ಒಳಗಾಗಿದ್ದಾರೆ.

ಆರೆಂಜ್ ಝೋನ್ ನಲ್ಲಿರುವ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿಲ್ಲ. ಎಣ್ಣೆ ಸಿಕ್ಕೆ ಸಿಗುತ್ತದೆ ಅಂತ ನಂಬಿಕೊಂಡಿದ್ದ ಕೆಲವು ಕುಡುಕರು ಬಾರ್ ಗಳ ಮುಂದೆ ಕಾಯ್ದು ಕುಳಿತಿದ್ದರು.

ಆದರೆ ಬಾರ್ ಗಳು ಓಪನ್ ಆಗಿ ಕುಡುಕರಿಗೆ ಬಾಟಲ್ ಗಳ ದರ್ಶನ ಆಗಲೇ ಇಲ್ಲ. 160 ಕ್ಕಿಂತ ಹೆಚ್ಚಿನ ಬಾರ್ ಗಳು ಕಲಬುರಗಿ ಜಿಲ್ಲೆಯಲ್ಲಿವೆ. ಆದರೆ ಹೆಚ್ಚುತ್ತಿರುವ ಕೊರೊನಾ ವೈರಸ್ ನಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

ಹೀಗಾಗಿ ಕೋವಿಡ್ -19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರೋಡಿನಲ್ಲಿ ಡ್ರಾಮಾ : ಪೊಲೀಸರು ಮಾಡಿದ್ದೇನು?