Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಡಿನಲ್ಲಿ ಡ್ರಾಮಾ : ಪೊಲೀಸರು ಮಾಡಿದ್ದೇನು?

ರೋಡಿನಲ್ಲಿ ಡ್ರಾಮಾ : ಪೊಲೀಸರು ಮಾಡಿದ್ದೇನು?
ರಾಯಚೂರು , ಸೋಮವಾರ, 4 ಮೇ 2020 (19:25 IST)
ಕೋವಿಡ್-19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮೂರನೇ ಹಂತ ಶುರುವಾಗುತ್ತಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಲವು ಸಡಿಲಿಕೆಗಳನ್ನು ಸರ್ಕಾರ ನೀಡಿದೆ.

ಪೊಲೀಸರು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ಇದೇ ವೇಳೆ ನಾಟಕದ ಅಣಕು ಪ್ರದರ್ಶನದ ಮೂಲಕ ರಾಯಚೂರು ನಗರದಲ್ಲಿ ಜನ ಜಾಗೃತಿ ಮೂಡಿಸಲಾಯಿತು.  ಮೂರನೇ ಹಂತವು ಮೇ 17 ರವರೆಗೂ ಮುಂದುವರಿಯಲಿದೆ. ಆ ನಿಮಿತ್ತ ಸಾರ್ವಜನಿಕರು ಐದಕ್ಕಿಂತ ಹೆಚ್ಚು ಜನರು ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಡ ತಕ್ಕದ್ದು.

ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯವಾಗಿ ಬಳಸಿರಿ. ಅಂಗಡಿಗಳ ಮುಂದೆ ಗುಂಪು ಗುಂಪಾಗಿ ಸೇರಿದಂತೆ ಮಾಲಿಕರು ಜವಬ್ದಾರಿ ವಹಿಸತಕ್ಕದ್ದು. ಒಂದು ವೇಳೆ ನಿಯಮಗಳನ್ನು ಮೀರಿ ನಡೆದಲ್ಲಿ ಮಾಲಿಕರ ಮೇಲೆ ಸೂಕ್ತ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುವದು. ಕೊರೊನಾ ನಿರ್ಮೂಲನೆಯಾಗುವವರೆಗೂ ಜಿಲ್ಲೆಯ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಿಂದ ಬರುವವರಿಗೆ ಇದು ಕಡ್ಡಾಯ