ಗ್ರೀನ್ ಝೋನ್ ನಲ್ಲಿರುವ ನಗರದಲ್ಲಿ ಮದ್ಯದ ಅಂಗಡಿಗಳು ಆರಂಭಗೊಳ್ಳುತ್ತಲೇ ಮಹಿಳೆಯರು ಮುಗಿಬಿದ್ದ ಘಟನೆ ನಡೆದಿದೆ.
ಕೊಪ್ಪಳದಲ್ಲಿ ಮದ್ಯದಂಗಡಿ ತೆರೆಯುತ್ತಿರೋದಕ್ಕೆ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಎಂಎಸ್ಐಎಲ್ ಅಂಗಡಿ ಮುಂದೆ ಜಮಾಯಿಸಿದ ಮಹಿಳೆಯರು, ಯಾವುದೇ ಕಾರಣಕ್ಕೂ ಅಂಗಡಿ ಓಪನ್ ಮಾಡಬಾರದೆಂದು ಆವಾಜ್ ಹಾಕಿದ್ದಾರೆ.
ಎರಡು ತಿಂಗಳಿಂದ ಇಲ್ಲಿನ ಮಹಿಳೆಯರು ನೆಮ್ಮದಿಯಿಂದ ಇದ್ದಾರೆ. ಇದೀಗ ಮದ್ಯದ ಅಂಗಡಿ ತೆರೆದರೆ ನಮಗೆ ಸಮಸ್ಯೆಯಾಗುತ್ತದೆ. ಯಾವುದೇ ಕಾರಣಕ್ಕೂ ಅಂಗಡಿ ಓಪನ್ ಮಾಡಲು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅಂಗಡಿ ಓಪನ್ ಮಾಡಿದ್ರೆ ಕುಡುಕರ ಹಾವಳಿ ಹೆಚ್ಚಾಗಲಿದ್ದು, ಇಲ್ಲಿನ ಮಹಿಳೆಯರು ಓಡಾಡಲು ಆಗಲ್ಲ. ಕುಡಿದು ಕುಡುಕರು ಕೂಗಾಡುತ್ತಾರೆ, ಕೆಟ್ಟ ಪದಗಳ ಬಳಕೆ ಮಾಡ್ತಾರೆ. ನಮಗೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ.
ನಮ್ಮ ಮಕ್ಕಳು ಕಾಲೇಜಿಗೆ ಹೋಗುತ್ತಾರೆ. ಈ ಮದ್ಯದ ಅಂಗಡಿಯಿಂದ ಕಿರಿಕಿರಿಯಾಗುತ್ತದೆ. ಕೂಡಲೇ ಈ ಅಂಗಡಿಯನ್ನು ಸ್ಥಳಾಂತರಿಸುವಂತೆ ಮಹಿಳೆಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.