Webdunia - Bharat's app for daily news and videos

Install App

ಸಾಬ್ರು ಪ್ರಧಾನಿಯಾದ್ರೆ ರಾಹುಲ್ ಗಾಂಧೀನಾ ಚಾ ಕೊಡ್ಲಿಕೆ ಇಟ್ಕೊಳ್ತಾರೆ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K
ಬುಧವಾರ, 16 ಅಕ್ಟೋಬರ್ 2024 (11:04 IST)
Photo Credit: X
ವಿಜಯಪುರ: ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ವಿಜಯಪುರದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್ ತಮ್ಮದೇ ಶೈಲಿಯಲ್ಲಿ ರಾಹುಲ್ ಮತ್ತು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಓಟಿಗಾಗಿ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಮುಂದೊಂದು ದಿನ ಮುಸ್ಲಿಂ ಜನ ಸಂಖ್ಯೆ ಜಾಸ್ತಿಯಾಗಿ ಸಾಬ್ರು ಪ್ರಧಾನ ಮಂತ್ರಿ ಆದರೆ ಈ ರಾಹುಲ್ ಗಾಂಧಿಯನ್ನು ಅವರ ಮನೆಯಲ್ಲಿ ಚಾ ಕೊಡ್ಲಿಕೆ ಇಟ್ಕೊಳ್ತಾರೆ, ಕಸ ಗುಡಿಸಕ್ಕೆ ಹೇಳ್ತಾರ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

‘ನಾವು ಏಕರೂಪ ನಾಗರಿಕೆ ಸಂಹಿತೆ ಜಾರಿಗೆ ಬರಬಹುದು, ವಕ್ಫ್ ಬೋರ್ಡ್ ತಿದ್ದುಪಡಿ ಬರಬಹುದು ಎಂದೆಲ್ಲಾ ಕನಸು ಕಂಡಿದ್ದೆವು. ಆದರೆ ನಾವು ಲೋಕಸಭೆ ಚುನಾವಣೆಯಲ್ಲಿ 2,000 ರೂ.ಗೆ ನಮ್ಮನ್ನು ನಾವು ಮಾರಿಕೊಂಡು ಬಿಟ್ಟಿದ್ದೀವಿ. ಹರ್ಯಾಣದಲ್ಲಿ 6 ಸಾವಿರ ರೂ. ಕೊಡ್ತೀವಿ ಎಂದರು ಕಾಂಗ್ರೆಸ್ ನವರು. ಜಿಲೇಬಿ ಕೊಡ್ತೀನಿ ಎಂದ ಆ ಅಯೋಗ್ಯ ನನ್ಮಗ. ಯಾರು ಅವ? ಮಂದ ಬುದ್ದಿ ರಾಹುಲ್ಲಾ.. ಎಲ್ಲಾ ಜಿಲೇಬಿ ಫ್ಯಾಕ್ಟರಿ ಮಾಡ್ತಾನಂತ. ಹೊಲದಾಗೆ ಜಿಲೇಬಿ ಹೂಳ್ತಾನೆ, ಅದು ಜಿಲೇಬಿ ಮರವಾಗ್ತದಂತ. ಇಂತಹವನನ್ನು ಪ್ರಧಾನ ಮಂತ್ರಿ ಮಾಡುವಷ್ಟು ಮೂರ್ಖರು ನಾವು’ ಎಂದರು.

ಇನ್ನೂ ಮುಂದುವರಿದು ‘ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಬಂದಿದ್ದಕ್ಕೆ 99 ಬಂತು ಎಂದು ಜಿಗಿಯಕ್ಕೆ ಹತ್ತಿದ್ರು. ಹರ್ಯಾಣದಲ್ಲಿ ಹಿಂದೂಗಳು ಗೂಟ ಹೊಡೆದ್ರು ನೋಡಿ. ಜನಕ್ಕೆ ಈಗ ಗೊತ್ತಾಗಿದೆ. ಇಲ್ಲಿ ಎಲ್ಲರಿಗೂ ವಕ್ಫ್ ಬೋರ್ಡ್ ನೋಟಿಸ್ ಹೋಗಿದೆ. ಇಲ್ಲಿ ಹೆಚ್ಚಿನ ಕಾಂಗ್ರೆಸ್ ಎಂಎಲ್ ಎಗಳಿದ್ದಾರೆ. ಮೊದಲು ಅವರ ಆಸ್ತಿಯನ್ನು ವಕ್ಫ್ ಆಸ್ತಿಗೆ ಸೇರಿಸಬೇಕು. ಅಂದರೆ ಇವರಿಗೆ ಮಾನ ಮರ್ಯಾದೆ ಇಲ್ಲ. ಮುಸ್ಲಿಮರು 40-50% ಆಗುವವರೆಗೆ ಮಾತ್ರ ಕಾಂಗ್ರೆಸ್ ನವರು ಎಂಎಲ್ಎ, ಎಂಪಿ ಆಗ್ತೀರಿ’ ಎಂದು ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments