ನವದಹಲಿ: ಮೈಸೂರು-ದರ್ಭಾಂಗ ನಡುವಿನ ಎಕ್ಸ್ ಪ್ರೆಸ್ ರೈಲು ಅಪಘಾತದ ಬಳಿಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಾಲಸೋರ್ ಘಟನೆ ಬಳಿಕವೂ ನಿಮಗೆ ಬುದ್ಧಿ ಬಂದಿಲ್ವಾ ಎಂದು ಕಿಡಿ ಕಾರಿದ್ದಾರೆ.
ಬಾಲಸೋರ್ ನಲ್ಲಿ ಈ ಮೊದಲು ರೈಲು ಅಪಘಾತ ಸಂಭವಿಸಿತ್ತು . ಮೈಸೂರು-ದರ್ಭಾಂಗ ಎಕ್ಸ್ ಪ್ರೆಸ್ ರೈಲು ಅಪಘಾತವೂ ಬಾಲಸೋರ್ ಅಪಘಾತವನ್ನೇ ಹೋಲುತ್ತದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು-ದರ್ಭಾಂಗ ಎಕ್ಸ್ ಪ್ರೆಸ್ ರೈಲು ನಿನ್ನೆ ತಮಿಳುನಾಡಿನ ತಿರುವಳ್ಳೂರು ಬಳಿ ಗೂಡ್ಸ್ ರೈಲಿಗೆ ಢಿಕ್ಕಿಯಾಗಿ ಅನಾಹುತ ಸಂಭವಿಸಿತ್ತು. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಈ ಕಾರಣಕ್ಕೆ ರಾಹುಲ್ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಬಾಲಸೋರ್ ಅಪಘಾತದಿಂದ ಕೇಂದ್ರ ಯಾವುದೇ ಪಾಠ ಕಲಿತಿಲ್ಲ. ಈ ಅಪಘಾತದ ಹೊಣೆ ಕೇಂದ್ರದ್ದೇ ಆಗಿರುತ್ತದೆ. ಇಂತಹ ಅಪಘಾತಗಳ ಬಗ್ಗೆ ಎಚ್ಚೆತ್ತುಕೊಳ್ಳಲು ಇನ್ನೂ ಎಷ್ಟು ಅಪಘಾತಗಳು ಸಂಭವಿಸಬೇಕು ಎಂದು ರಾಹುಲ್ ಗಾಂಧಿ ಆಕ್ರೋಶದಿಂದ ಪ್ರಶ್ನೆ ಮಾಡಿದ್ದಾರೆ.