Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಕ್ಫ್ ಆಸ್ತಿ ಹೊಡೆದ ಕಾಂಗ್ರೆಸ್ ನಾಯಕರು ಯಾರು ಎಂದು ಲಿಸ್ಟ್ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್

Basanagouda Patil Yatnal

Krishnaveni K

ವಿಜಯಪುರ , ಬುಧವಾರ, 16 ಅಕ್ಟೋಬರ್ 2024 (10:52 IST)
ವಿಜಯಪುರ: ವಕ್ಫ್ ಆಸ್ತಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ವಕ್ಫ್ ಆಸ್ತಿ ಹೊಡೆದವರು ಯಾರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಲಿಸ್ಟ್ ಕೊಟ್ಟರು.

ವಿಜಯಪುರದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಬಸನಗೌಡ ಯತ್ನಾಳ್ ಜೊತೆಗೆ ಸಿಟಿ ರವಿ ಮುಂತಾದ ಬಿಜೆಪಿ ನಾಯಕರೂ ಕೈ ಜೋಡಿಸಿದ್ದರು. ವಿಜಯಪುರದಲ್ಲಿ ವಕ್ಫ್ ಆಸ್ತಿ ಕಬಳಿಕೆ ಮಾಡಲು ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಆದೇಶ ನೀಡುತ್ತಿದ್ದರು. ಸುಮಾರು 10 ಸಾವಿರ ಎಕರೆ ಪ್ರದೇಶ ವಕ್ಫ್ ಆಸ್ತಿಗೆ ಸೇರ್ಪಡೆಗೊಳಿಸಲು ಆಸ್ತಿ ಮಾಲಿಕರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಬೃಹತ್ ಪ್ರತಿಭಟನೆ ನಡೆದಿದೆ.

ಈ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನ ಯಾವೆಲ್ಲಾ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಲಿಸ್ಟ್ ಕೊಟ್ಟರು. ಇದನ್ನ ನಾವು ಹೇಳಿದ್ದಲ್ಲ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಮನ್ನಿಪ್ಪಾಡಿ ಹೇಳಿರೋದು ಎಂದರು.

ಅನ್ವರ್ ಅವರು ಹೇಳಿರುವ ಪ್ರಕಾರ ಕರ್ನಾಟಕದಲ್ಲಿ ವಕ್ಫ್ ಆಸ್ತಿ 2 ಲಕ್ಷ 31 ಸಾವಿರ ಕೋಟಿ ಹಗರಣವಾಗಿದೆ ಎನ್ನುತ್ತಾರೆ. 20 ಸಾವಿರ ಎಕರೆ ಮುಸ್ಲಿಂ ನಾಯಕರೇ ಹೊಡೆದುಕೊಂಡಿದ್ದಾರೆ. ರೆಹಮಾನ್ ಖಾನ್, ಜಾಫರ್ ಶರೀಫ್, ಎನ್ ಎ ಹ್ಯಾರಿಸ್, ಕಮರುಲ್ ಇಸ್ಲಾಂ, ಖನೀಜಾ ಫಾತಿಮ್, ಸಿಎಂ ಇಬ್ರಾಹಿಂ, ಮಲ್ಲಿಕಾರ್ಜುನ ಖರ್ಗೆ ಸಹಿತ ಎಲ್ಲರೂ ವಕ್ಫ್ ಆಸ್ತಿ ಹೊಡೆದುಕೊಂಡವರು. ಇವರೆಲ್ಲಾ ಮುಸ್ಲಿಮರನ್ನು ಉದ್ದಾರ ಮಾಡ್ತೀನಿ ಎಂದು ಹೇಳುವವರು. ಆದರೆ ಅವರ ಹೆಸರಿನಲ್ಲಿ ವಕ್ಫ್ ಆಸ್ತಿ ಹೊಡೆದುಕೊಂಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಮಾಣ: ಕಾಂಗ್ರೆಸ್ ತೀರ್ಮಾನವೇನು ನೋಡಿ