ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಮೈತ್ರಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಸೋಮವಾರ ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
ವಸ್ತು ಪ್ರದರ್ಶನವು ಜ. 06 ಬುಧವಾರದವರೆಗೆ ಇರಲಿದೆ. ವಸ್ತು ಪ್ರದರ್ಶನದಲ್ಲಿ ಮೈತ್ರಿ ಸರ್ಕಾರದ ಪ್ರಮುಖ ಜನಪರ ಯೋಜನೆಗಳು ಚೆನ್ನಾಗಿ ಅನಾವರಣಗೊಂಡಿವೆ. ಬೇರೆ ಬೇರೆ ಗ್ರಾಮಗಳಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಸಾರ್ವಜನಿಕರು ವಸ್ತು ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಯೋಜನೆಗಳನ್ನು ತಿಳಿಯಬೇಕು. ಸಾರ್ವಜನಿಕರಿಗೆ ನೂತನ ಯೋಜನೆಗಳ ಕರಪತ್ರ ವಿತರಿಸಿದಲ್ಲಿ ಅನುಕೂಲವಾಗುವುದು ಎಂದರು.
ವಸ್ತು ಪ್ರದರ್ಶನದಲ್ಲಿರುವ ಬಡವರ ಬಂಧು, ರೈತ ಬಂಧು, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಕ್ರಮ, ಕೈಗಾರಿಕಾ ಕ್ಲಸ್ಟರ, ಹಸಿರು ಕರ್ನಾಟಕ, ಆಧುನಿಕ ಕೃಷಿ ಪದ್ದತಿಗೆ ಆಧ್ಯತೆ, ಜನತಾ ದರ್ಶನ, ಮುಖ್ಯಮಂತ್ರಿ ಮಾತೃಶ್ರೀ, ಸಂಧ್ಯಾ ಸುರಕ್ಷಾ, ಬೆಳೇ ಸಮೀಕ್ಷೆ, ನಿರುದ್ಯೋಗ ನಿವಾರಣೆ, ಆಯಷ್ಮಾನ ಭಾರತ ಆರೋಗ್ಯ ಕರ್ನಾಟಕ, ಕಾಯಕ ಬಡ್ಡಿರಹಿತ ಸಾಲಗಳಂಥಹ ಹತ್ತು ಹಲವು ಯೋಜನೆಗಳ ಮಾಹಿತಿ ಪಡೆದರು.