ಮಂಡ್ಯದ ಕೆಆರ್ ಪೇಟೆಯಲ್ಲಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯ ಅಡಿಯಲ್ಲಿ 26ಕ್ಕೂ ಹೆಚ್ಚಿನ ವಿವಿಧ ಫಲಾನುಭವಿಗಳಿಗೆ ಪಂಪ್ ಸೆಟ್ ಸರಬರಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆ ವೇಳೆ ಗುತ್ತಿಗೆದಾರನು ಸರಬರಾಜು ಮಾಡಲು ತಂದಿದ್ದ ಸಬ್ ಮರ್ಸಿಬಲ್ ಪಂಪುಗಳು, ಪೈಪುಗಳು ಹಾಗೂ ವಿವಿಧ ಸಾಮಗ್ರಿಗಳು ಐಎಸ್ ಐ ಗುಣಮಟ್ಟದ ಮುದ್ರೆಯಿಲ್ಲದ ಕಳಪೆ ಗುಣಮಟ್ಟದಾಗಿತ್ತು. ಇದನ್ನು ತಪಾಸಣೆ ನಡೆಸಿದ ಶಾಸಕ ಡಾ.ನಾರಾಯಣಗೌಡ ಸರಬರಾಜುದಾರನಿಗೆ, ‘ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು, ರೈತರಿಗೆ ಸರ್ಕಾರ ದುಡ್ಡು ಕೊಡುತ್ತಿದೆ. ಬಂದು ದುಡ್ಡು ಹೊಡೆದುಕೊಂಡು ಹೋಗಲು ನಿಮ್ಮ ಮನೆ ಆಸ್ತಿ ಅಲ್ಲ ಇದು. ರೈತರ ಮನೆ ಹಾಳು ಮಾಡುತ್ತೀರಾ ನೀವು’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.