Publish Date: Sun, 03 Feb 2019 (20:06 IST)
Updated Date: Sun, 03 Feb 2019 (20:07 IST)
ಗಂಗಾ ಕಲ್ಯಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಸಾಮಾಗ್ರಿಗಳ ಸರಬರಾಜು ಮಾಡುತ್ತಿದ್ದ ಘಟನೆ ನಡೆದಿದೆ.
ಏಜೆನ್ಸಿಯವರನ್ನು ಶಾಸಕ ನಾರಾಯಣಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಘಟನೆ ನಡೆದಿದೆ.
ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್‌ಸೆಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೀವು ರೈತರಿಗೆ ಕೊಡಲು ತಂದಿರುವ ಪಂಪ್‌ಸೆಟ್, ಪೈಪ್‌ಗಳಲ್ಲಿ ಐಎಸ್‌ಐ ಮಾರ್ಕ್ ಇದೆಯಾ? ಇದ್ದರೆ ತೋರಿಸು ಎಂದು ಟೆಂಡರ್ ಪಡೆದ ಏಜೆನ್ಸಿಯವರಿಗೆ ಪ್ರಶ್ನೆ ಮಾಡಿದ ಶಾಸಕ ನಾರಾಯಣಗೌಡ, ಯಾರ ಮನೆ ಹಾಳು ಮಾಡಲು ಬಂದಿದ್ದೀಯ ನೀನು. ರೈತರಿಗೆ ಸರ್ಕಾರ ದುಡ್ಡು ಕೊಡುತ್ತಿದೆ. ಬಂದು ದುಡ್ಡು ಹೊಡೆದುಕೊಂಡು ಹೋಗಲು ನಿಮ್ಮ ಮನೆ ಆಸ್ತಿ ಅಲ್ಲ ಇದು. ರೈತರ ಮನೆ ಹಾಳು ಮಾಡ್ತೀರ ನೀವು ಎಂದು ಏಜೆನ್ಸಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.