ಲೋಕಸಭೆಯಲ್ಲಿ 2019 – 20ನೇ ಸಾಲಿನ ಕೇಂದ್ರ ಬಜೆಟ್ ನ್ನು ಮಂಡಿಸಿದ ಹಣಕಾಸು ಸಚಿವ ಪಿಯೂಷ್ ಗೋಯಲ್, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಪ್ರಕಟಿಸಿದ್ದಾರೆ.
ಅಸಂಘಟಿತ ವಲಯದಲ್ಲಿ ಕಾರ್ಮಿಕರಿಗೆ ಬೃಹತ್ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದರ ಅಡಿಯಲ್ಲಿ 10 ಕೋಟಿ ಜನರಿಗೆ ಸೌಲಭ್ಯ ದೊರೆಯಲಿದೆ., 60 ವರ್ಷದ ಮೇಲಿನ ಕಾರ್ಮಿಕರಿಗೆ ಮಾಸಿಕ 3ಸಾವಿರ ರೂ. ಪಿಂಚಣಿ ದೊರೆಯಲಿದೆ ಎಂದು ಪ್ರಕಟಿಸಿದರು.
ಪ್ರಧಾನ ಮಂತ್ರಿ ಶ್ರಮಯೋಗಿ ಮಂದನ್ ಯೋಜನೆಗೆ ನಾವು ಚಾಲನೆ ನೀಡುತ್ತಿದ್ದು, ಇದರ ಅಡಿಯಲ್ಲಿ ಅಸಂಘಟಿತ ವಲಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ ನೀಡಲಾಗುವುದು ಎಂದರು. ಈ ಯೋಜನೆಯ ಲಾಭ ಪಡೆಯಲು ಕಾರ್ಮಿಕರು ಮಾಸಿಕ 100 ರೂ. ಗಳನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು. 10 ಕೋಟಿ ಕಾರ್ಮಿಕರಿಗೆ ಇದರ ಲಾಭ ಸಿಗಲಿದೆ. ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗೆ ಪ್ರಕಟಿಸಲಾಗಿರುವ ವಿಶ್ವದ ಅತಿದೊಡ್ಡ ಪಿಂಚಣಿ ಯೋಜನೆ ಇದಾಗಲಿದೆ ಎಂದು ಅವರು ಆಶಿಸಿದರು.