Publish Date: Tue, 22 Sep 2020 (11:20 IST)
Updated Date: Tue, 22 Sep 2020 (11:21 IST)
ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಮೂರು ದಾಖಲೆಗಳನ್ನು ಮಾಡುವ ಅವಕಾಶವಿದೆ.
ಐಪಿಎಲ್ ಪಂದ್ಯಗಳಲ್ಲಿ ಧೋನಿ ಇದುವರೆಗೆ 295 ಸಿಕ್ಸರ್ ಸಿಡಿಸಿದ್ದು, ಇಂದು ಐದು ಸಿಕ್ಸರ್ ಸಿಡಿಸಿದರೆ 300 ರ ಗಡಿ ತಲುಪುತ್ತಾರೆ. 300 ಪ್ಲಸ್ ಸಿಕ್ಸರ್ ಸಿಡಿಸಿದ ದಾಖಲೆ ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಹೆಸರಿನಲ್ಲಿದೆ.
ಧೋನಿ ಐಪಿಎಲ್ ನಲ್ಲಿ ವಿಕೆಟ್ ಕೀಪರ್ ಆಗಿ ಮತ್ತು ಸಾಮಾನ್ಯ ಫೀಲ್ಡರ್ ಆಗಿ 100 ಕ್ಯಾಚ್ ಪಡೆದಿದ್ದಾರೆ. ಇನ್ನು ಮೂರು ಕ್ಯಾಚ್ ಪಡೆದರೆ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ರೈನಾ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಮೊದಲನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ.