Publish Date: Tue, 22 Sep 2020 (10:29 IST)
Updated Date: Tue, 22 Sep 2020 (10:31 IST)
ದುಬೈ: ತಂಡ ಯಾವುದೇ ಇರಲಿ, ಎಲ್ಲೇ ಆಡುತ್ತಿರಲಿ, ತಾವು ಪಕ್ಕಾ ಕನ್ನಡಿಗ ಎಂಬುದನ್ನು ಕೆಎಲ್ ರಾಹುಲ್ ಆಗಾಗ ನಿರೂಪಿಸುತ್ತಿರುತ್ತಾರೆ.
ಸದ್ಯಕ್ಕೆ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ ರಾಹುಲ್ ತಮ್ಮ ತಂಡದಲ್ಲಿರುವ ಕನ್ನಡಿಗ ಆಟಗಾರರ ಜತೆ ಕನ್ನಡದಲ್ಲೇ ಸಲಹೆ, ಸೂಚನೆ ನೀಡುತ್ತಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಮಯಾಂಕ್ ಅಗರ್ವಾಲ್ ಗೆ ಮುಂದೆ ಬಾ ಎಂದು ಕನ್ನಡದಲ್ಲೇ ಆವಾಝ್ ಹಾಕಿದ್ದನ್ನು ಗುರುತಿಸಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅವರ ಕಾಲೆದಿದ್ದಾರೆ. ಸ್ವತಃ ಆರ್ ಸಿಬಿ ಪ್ರಚಾರಕ ಡ್ಯಾನಿಶ್ ಸೇಠ್ ರಾಹುಲ್ ಕಾಲೆಳೆದಿದ್ದು, ನಿಮ್ಮ ಕನ್ನಡ ಮಾತ್ರ ಸೂಪರ್ ಎಂದಿದ್ದಾರೆ. ಇತರ ಅಭಿಮಾನಿಗಳೂ ನಮಗೆ ಆರ್ ಸಿಬಿಯಷ್ಟೇ ಪಂಜಾಬ್ ತಂಡವೂ ಇಷ್ಟ. ಯಾಕೆಂದರೆ ಇಲ್ಲಿ ಕನ್ನಡಿಗರೇ ಜಾಸ್ತಿ ಎಂದು ಕಾಮೆಂಟ್ ಮಾಡಿದ್ದಾರೆ.