Publish Date: Tue, 22 Sep 2020 (10:42 IST)
Updated Date: Tue, 22 Sep 2020 (10:43 IST)
ದುಬೈ: ಐಪಿಎಲ್ 13 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ. ಚೆನ್ನೈಗೆ ಇದು ಎರಡನೇ ಪಂದ್ಯವಾಗಿದ್ದು, ರಾಜಸ್ಥಾನ್ ಮೊದಲ ಪಂದ್ಯವಾಡುತ್ತಿದೆ.
ಚೆನ್ನೈ ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದು, ಮತ್ತೊಂದು ಜಯದ ಹವಣಿಕೆಯಲ್ಲಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ಗೆ ಐಪಿಎಲ್ ನಲ್ಲಿ ಶುಭಾರಂಭ ಮಾಡುವ ತವಕ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ವಾಹಿನಿಯಾಗಲಿದೆ.