Publish Date: Mon, 21 Sep 2020 (11:04 IST)
Updated Date: Mon, 21 Sep 2020 (11:05 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಕಿಂಗ್ಸ್ ಇಲೆವೆನ್ ವಿರುದ್ಧ ಗೆಲುವು ಸಾಧಿಸಿ ಖುಷಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಬೆನ್ನಲ್ಲೇ ಆಘಾತ ಸಿಕ್ಕಿದೆ.
ಪಂಜಾಬ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ರವಿಚಂದ್ರನ್ ಅಶ್ವಿನ್ ಭುಜದ ನೋವಿಗೊಳಗಾಗಿದ್ದಾರೆ. ಅವರ ಸ್ಥಿತಿ ಗಂಭೀರವಲ್ಲದೇ ಇದ್ದರೂ ಮುಂದಿನ ಪಂದ್ಯಕ್ಕೆ ಅವರು ಲಭ್ಯರಿರುತ್ತಾರೋ ಇಲ್ಲವೋ ಎಂಬುದನ್ನು ಪಿಸಿಯೋ ನಿರ್ಧರಿಸಿದ್ದಾರೆ. ಅಶ್ವಿನ್ ಉಪಸ್ಥಿತಿ ದೆಹಲಿಗೆ ಮುಂದಿನ ಪಂದ್ಯಗಳಿಗೆ ನಿರ್ಣಾಯಕವಾಗಲಿದೆ. ಅವರ ಅನುಭವ ಮತ್ತು ಕರಾರುವಾಕ್ ದಾಳಿ ಇಲ್ಲಿನ ಪಿಚ್ ಗೆ ಹೇಳಿಮಾಡಿಸಿದಂತಿದೆ.