Publish Date: Mon, 21 Sep 2020 (10:41 IST)
Updated Date: Mon, 21 Sep 2020 (10:43 IST)
ನವದೆಹಲಿ: ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬಂದಿರುವ ಕ್ರಿಕೆಟಿಗ ಸುರೇಶ್ ರೈನಾ ಈಗ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದಾರೆ.
ಇಲ್ಲಿ ಕ್ರಿಕೆಟ್ ಪುನರುತ್ಥಾನಕ್ಕಾಗಿ ಹಲವು ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ರೈನಾ ಬಿಡುವಿನ ವೇಳೆಯಲ್ಲಿ ಭಾರತೀಯ ಯೋಧರೊಂದಿಗೆ ಕೆಲವು ಕಾಲ ಸಮಯ ಕಳೆದಿದ್ದಾರೆ. ಭಾರತೀಯ ಯೋಧರ ಸೇವೆ, ಬಲಿದಾನವನ್ನು ಕೊಂಡಾಡಿರುವ ರೈನಾ ಕಠಿಣ ಪರಿಸ್ಥಿತಿಯಲ್ಲೂ ಗಡಿ ಕಾಯುವ ವೀರ ಯೋಧರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.