Publish Date: Mon, 21 Sep 2020 (09:45 IST)
Updated Date: Mon, 21 Sep 2020 (09:47 IST)
ದುಬೈ: ಐಪಿಎಲ್ 13 ರ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ವಿರುದ್ಧ ಸೂಪರ್ ಓವರ್ ನಲ್ಲಿ ಸೋಲನುಭವಿಸಿತು. ಆದರೆ ಇದಕ್ಕೆ ಅಂಪಾಯರ್ ಪ್ರಮಾದವೇ ಕಾರಣವಾಯಿತೇ? ಹೀಗೊಂದು ಅನುಮಾನ ಕಾಡಿದೆ.
ಏಕಾಂಗಿ ಹೋರಾಟ ನಡೆಸುತ್ತಿದ್ದ ಪಂಜಾಬ್ ತಂಡದ ಮಯಾಂಕ್ ಅಗರ್ವಾಲ್ 19 ನೇ ಓವರ್ ನಲ್ಲಿ ಎಕ್ಸ್ ಟ್ರಾ ಕವರ್ ಕಡೆಗೆ ಬಾಲ್ ತಳ್ಳಿ ಚುರುಕಾಗಿ ಎರಡು ರನ್ ಓಡಿದ್ದರು. ಆದರೆ ಅಂಪಾಯರ್ ಮೊದಲನೇ ಓಟವನ್ನು ಶಾರ್ಟ್ ರನ್ ಎಂದು ಪರಿಗಣಿಸಿ ಕೇವಲ ಸಿಂಗಲ್ಸ್ ನೀಡಿದ್ದರು. ಒಂದು ವೇಳೆ ಅಲ್ಲಿ ಎರಡು ರನ್ ನೀಡಿದ್ದರೆ ಪಂಜಾಬ್ ಪಂದ್ಯ ಗೆಲ್ಲುತ್ತಿತ್ತು. ಆದರೆ ಶಾರ್ಟ್ ರನ್ ಎಂದು ಅಂಪಾಯರ್ ವಿವಾದಾತ್ಮಕ ತೀರ್ಪು ನೀಡಿದ್ದನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಪಂದ್ಯದಲ್ಲಿ ಅಂಪಾಯರ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು ಎಂದು ಟೀಕಿಸಿದ್ದಾರೆ.