Publish Date: Mon, 21 Sep 2020 (09:17 IST)
Updated Date: Mon, 21 Sep 2020 (09:19 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಗೆಲ್ಲುವ ಉತ್ಸಾಹ ರಾಯಲ್ ಚಾಲೆಂಜರ್ಸ್ ಗೆ ಎಷ್ಟಿದೆಯೋ, ಈ ಪಂದ್ಯದಲ್ಲಿ ನಾಯಕ ಕೊಹ್ಲಿ ಕೂಡಾ ತಮ್ಮ ರನ್ ಬೇಟೆ ಹೆಚ್ಚಿಸುವ ಹುಮ್ಮಸ್ಸಿನಲ್ಲಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ನಲ್ಲಿ 5412 ರನ್ ಗಳಿಸಿದ್ದು, ಐಪಿಎಲ್ ನಲ್ಲಿ ಸರ್ವಾಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ಅವರನ್ನು ಹಿಂದಿಕ್ಕಲು ಯಾರಿಗೂ ಸಾಧ‍್ಯವಾಗದು. ಆದರೂ ತಮ್ಮ ರನ್ ಬೇಟೆಯನ್ನು ಮತ್ತಷ್ಟು ವಿಸ್ತರಿಸುವ ಉತ್ಸಾಹ ಅವರಲ್ಲಿದೆ. ಅವರು ರನ್ ಗುಡ್ಡೆ ಹಾಕಿದರೆ ಮಾತ್ರ ಆರ್ ಸಿಬಿಗೂ ಲಾಭ.