Publish Date: Mon, 21 Sep 2020 (09:14 IST)
Updated Date: Mon, 21 Sep 2020 (09:16 IST)
ಮುಂಬೈ: ವಿವಾದಾತ್ಮಕ ಹೇಳಿಕೆಗಳಿಂದಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ಐಪಿಎಲ್ ಕಾಮೆಂಟೇಟರ್ ಸ್ಥಾನ ಮಾನ ಕಳೆದುಕೊಂಡಿದ್ದ ಸಂಜಯ್ ಮಂಜ್ರೇಕರ್ ಗೆ ಕೆಟ್ಟ ಮೇಲೂ ಬುದ್ಧಿ ಬಂದ ಹಾಗೆ ಕಾಣುತ್ತಿಲ್ಲ.
ಈಗ ಮತ್ತೊಮ್ಮೆ ವಿವಾದಾತ್ಮಕ ಟ್ವೀಟ್ ಮಾಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್ ನಲ್ಲಿ ಪಿಯೂಷ್ ಚಾವ್ಲಾ, ಅಂಬಟಿ ರಾಯುಡು ಪ್ರದರ್ಶನದ ಬಗ್ಗೆ ಹೊಗಳುವಾಗ ಅವರನ್ನು ‘ಲೋ ಪ್ರೊಫೈಲ್ ಕ್ರಿಕೆಟಿಗರು’ ಎಂದು ಸಂಬೋಧಿಸಿ ಮಂಜ್ರೇಕರ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಇವರೆಲ್ಲಾ ಲೋ ಪ್ರೊಫೈಲ್ ಎಂದು ನಿಮಗೆ ಹೇಳಿದವರು ಯಾರು? ನಿಮ್ಮ ವಿಶ್ಲೇಷಣೆಯೇನೋ ಚೆನ್ನಾಗಿದೆ. ಆದರೆ ಕ್ರಿಕೆಟಿಗರಿಗೆ ರ್ಯಾಂಕಿಂಗ್ ನೀಡಲು ನೀವ್ಯಾರು ಎಂದು ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ.