Publish Date: Thu, 05 Nov 2020 (09:11 IST)
Updated Date: Thu, 05 Nov 2020 (09:13 IST)
ದುಬೈ: ಐಪಿಎಲ್ 13 ರ ಕ್ವಾಲಿಫೈಯರ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಸೆಣಸಾಡಲಿವೆ.
ಎರಡೂ ತಂಡಗಳು ಅಗ್ರ ಸ್ಥಾನದಲ್ಲಿರುವುದರಿಂದ ಈ ಪಂದ್ಯದಲ್ಲಿ ಜಿದ್ದಾ ಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಲೀಗ್ ಹಂತದಲ್ಲಿ ಈ ಮೊದಲು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಈಗ ಪ್ಲೇ ಆಫ್ ಹಂತದಲ್ಲಿ ಎರಡೂ ತಂಡಗಳೂ ಫೈನಲ್ ಗೇರುವ ನಿಟ್ಟಿನಲ್ಲಿ ಕೊಂಚ ಹೆಚ್ಚೇ ಪರಿಶ್ರಮಪಡಲಿವೆ. ಮುಂಬೈಗೆ ನಾಯಕ ರೋಹಿತ್ ಶರ್ಮಾ ಪುನರಾಗಮನವಾಗಿರುವುದು ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.