Publish Date: Wed, 04 Nov 2020 (10:31 IST)
Updated Date: Wed, 04 Nov 2020 (10:32 IST)
ದುಬೈ: ಐಪಿಎಲ್ 13 ರಲ್ಲಿ ಲೀಗ್ ಹಂತದ ಪಂದ್ಯಗಳೆಲ್ಲಾ ಮುಗಿದಿದ್ದು, ಇಂದು ಬಿಡುವಿನ ದಿನವಾಗಿದೆ. ಇಂದು ಯಾವುದೇ ಪಂದ್ಯ ನಡೆಯುತ್ತಿಲ್ಲ.
ನಾಳೆಯಿಂದ ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗಲಿದೆ. ನಾಳೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವಷ್ಟೇ ಬಾಕಿಯಿದೆ. ಅಲ್ಲಿಗೆ ಈ ಬಾರಿಯ ಐಪಿಎಲ್ ಮುಕ್ತಾಯ ಕಾಣಲಿದೆ.