Publish Date: Wed, 04 Nov 2020 (10:08 IST)
Updated Date: Wed, 04 Nov 2020 (10:10 IST)
ದುಬೈ: ಪುರುಷರ ಐಪಿಎಲ್ ಆಯ್ತು, ಇದೀಗ ಇಂದಿನಿಂದ ಮಹಿಳೆಯರ ಐಪಿಎಲ್ ಪಂದ್ಯಾವಳಿ ಶಾರ್ಜಾದಲ್ಲಿ ಆರಂಭವಾಗಲಿದೆ.
ಮೊದಲ ಪಂದ್ಯ ಕಳೆದ ಬಾರಿಯ ಚಾಂಪಿಯನ್ ನೊವಾಸ್ ಮತ್ತು ರನ್ನರ್ ಅಪ್ ವೆಲಾಸಿಟಿ ತಂಡಗಳ ನಡುವೆ ನಡೆಯಲಿದೆ. ಸತತ ಎರಡು ಪ್ರಶಸ್ತಿ ಗೆದ್ದಿರುವ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್ ನೊವಾಸ್ ಮತ್ತೊಂದು ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ವೆಲಾಸಿಟಿ ತಂಡಕ್ಕೆ ಮಿಥಾಲಿ ರಾಜ್ ನಾಯಕಿ. ಈ ಇಬ್ಬರು ಸೂಪರ್ ಸ್ಟಾರ್ ಆಟಗಾರ್ತಿಯರ ನಡುವಿನ ಕಾದಾಟ ಪಂದ್ಯಕ್ಕೆ ಆಕರ್ಷಣೆ ತರಲಿದೆ.