Publish Date: Wed, 04 Nov 2020 (10:49 IST)
Updated Date: Wed, 04 Nov 2020 (10:51 IST)
ದುಬೈ: ಐಪಿಎಲ್ 13 ರ ಪ್ಲೇ ಆಫ್ ಹಂತದ ಪಂದ್ಯಗಳು ಇನ್ನೇನು ಶುರುವಾಗುತ್ತಿದ್ದು, ಇದಕ್ಕೂ ಮೊದಲು ಆರ್ ಸಿಬಿ ತನ್ನ ಬ್ಯಾಟಿಂಗ್ ಸರಿಪಡಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡದ ಪ್ರದರ್ಶನ ಕಳೆಗುಂದಿದೆ. ಬ್ಯಾಟಿಂಗ್ ನಲ್ಲಿ ಎಬಿಡಿ ಕಳೆದ ಪಂದ್ಯದಲ್ಲಿ ರನ್ ಗಳಿಸಿದರೂ ಅವರ ಎಂದಿನ ಹೊಡೆಬಡಿಯ ಶೈಲಿ ಮತ್ತೆ ಬರಬೇಕಿದೆ. ಕೊಹ್ಲಿ ಮತ್ತೆ ಕೊಂಚ ಕಳೆಗುಂದಿದ್ದಾರೆ. ಇತ್ತ ದೇವದತ್ತ್ ಪಡಿಕ್ಕಲ್ ಗೆ ಉತ್ತಮ ಸಾಥ್ ಸಿಗುತ್ತಿಲ್ಲ. ಇದೆಲ್ಲಾ ಹುಳುಕುಗಳನ್ನು ಸರಿಪಡಿಸದೇ ಹೋದರೆ ಪ್ಲೇ ಆಫ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ನಂತಹ ಘಟಾನುಘಟಿ ತಂಡಗಳನ್ನು ಎದುರಿಸುವುದು ಕಷ್ಟವಾಗಲಿದೆ.