ಬೆಂಗಳೂರು: ಭಾನುವಾರ ಮುಗಿಸಿ ಸೋಮವಾರ ಬಂತೆಂದರೆ ನಮಗೆ ಹೊಸ ವಾರ ಶುರುವಾದಂತೆ. ಮತ್ತೆ ದೈನಂದಿನ ಆಫೀಸ್, ಶಾಲೆ, ಕಾಲೇಜು ಎಂದು ನಮ್ಮ ದಿನಚರಿ ಶುರುವಾಗುತ್ತದೆ. ಹಾಗಿದ್ದರೆ ಸೋಮವಾರ ನಮ್ಮ ಮೂಡ್ ಹೇಗಿರುತ್ತದೆ ಎಂಬ ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ ನೋಡಿ.
ಅಧ್ಯಯನ ವರದಿಗಳ ಪ್ರಕಾರ ಸೋಮವಾರ ಸಾಮಾನ್ಯವಾಗಿ ಎಲ್ಲರಲ್ಲಿ ಒತ್ತಡ, ಆತಂಕ ಸಹಜವಾಗಿರುತ್ತದೆ. ಯಾಕೆಂದರೆ ಭಾನುವಾರದ ವಿಶ್ರಾಂತಿ ನಂತರ ಮತ್ತೆ ದೈನಂದಿನ ಬ್ಯುಸಿ ಜೀವನಕ್ಕೆ ಮರಳುವ ದಿನವಾಗಿದೆ. ಹಾಗಂತ ಎಲ್ಲರೂ ಆತಂಕ, ಬೇಸರದಲ್ಲಿರುತ್ತಾರೆ ಎಂದಲ್ಲ. ಕೆಲವರಿಗೆ ಸೋಮವಾರ ಖುಷಿಯಿಂದ ಕಾಯುವ ಉತ್ಸಾಹದಾಯಕ ದಿನವಾಗಿರಬಹುದು.
ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಷನ್ ಅಧ್ಯಯದ ವರದಿ ಪ್ರಕಾರ ಸೋಮವಾರಗಳಂದು ನಾವು ಸಾಮಾನ್ಯವಾಗಿ ಎದುರಿಸುವ ಭಾವನೆಗಳ ಶೇಕಡಾವಾರು ಹೀಗಿದೆ:
ಒತ್ತಡ-62%
ಆಂಕ್ಸೈಟಿ- 44%
ಸುಸ್ತು- 41%
ಉತ್ಸಾಹ-36%
ಭಯ-33%
ಎಲ್ಲರಿಗೂ ಸೋಮವಾರ ಒತ್ತಡವಾಗಿರಬೇಕೆಂದೇನಿಲ್ಲ. ಕೆಲವರು ಸೋಮವಾರವನ್ನು ಉತ್ಸಾಹದಿಂದ, ಸಂತೋಷದಿಂದ ಮತ್ತು ಕುತೂಹಲದಿಂದ ಎದುರುಗೊಳ್ಳಬಹುದು. ಅದು ನಾವು ನಮ್ಮ ಕೆಲಸವನ್ನುಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಹಾಗಿದ್ದರೆ ಸೋಮವಾರ ನಿಮ್ಮ ಮೂಡ್ ಯಾವ ಕೆಟಗರಿಯದ್ದಾಗಿದೆ? ನೀವೇ ಅವಲೋಕಿಸಿಕೊಳ್ಳಿ.