ಬೆಂಗಳೂರು: ಕೆಲವರು ತರಕಾರಿ, ಸಾಂಬಾರ್, ಅನ್ನ ಇತ್ಯಾದಿ ಬೇಯಿಸಿದ ಆಹಾರವನ್ನು ದಿನಗಟ್ಟಲೇ ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಬೇಯಿಸಿದ ಆಹಾರವನ್ನು ಎಷ್ಟು ಹೊತ್ತು ಫ್ರಿಡ್ಜ್ ನಲ್ಲಿಟ್ಟು ಸೇವಿಸಬಹುದು ತಿಳಿದುಕೊಳ್ಳಿ.
ಅನ್ನವಾಗಲೀ, ಸಾಂಬಾರ್ ಆಗಲೀ ಕೆಲವರು ಮಿಕ್ಕಿದೆ ಎಂದು ಫ್ರಿಡ್ಜ್ ನಲ್ಲಿ ಎರಡೋ ಮೂರೋ ದಿನ ಇಟ್ಟು ಸೇವನೆ ಮಾಡುತ್ತಾರೆ. ಇನ್ನು ಕೆಲವರು ಒಂದು ವಾರಕ್ಕಾಗುವಷ್ಟು ಸಾಂಬಾರ್ ರೆಡಿ ಮಾಡಿ ಫ್ರಿಡ್ಜ್ ನಲ್ಲಿಟ್ಟುಕೊಂಡು ಬಳಸುತ್ತಾರೆ. ಅವರವರ ಅನುಕೂಲಕ್ಕೆ ಈ ರೀತಿ ಮಾಡಿದರೂ ಇದು ಆರೋಗ್ಯದ ದೃಷ್ಟಿಯಿಂದ ಖಂಡಿತಾ ಒಳ್ಳೆಯ ಅಭ್ಯಾಸವಲ್ಲ.
ಯಾವಾಗಲೂ ಬೇಯಿಸಿದ ಆಹಾರವನ್ನು ಫ್ರೆಶ್ ಆಗಿರುವಾಗಲೇ ಸೇವಿಸಿದರೆ ಉತ್ತಮ. ಹಾಗಿದ್ದರೂ ಕೊಂಚ ಮಿಕ್ಕಿದೆ ಎಂದರೆ ಹೆಚ್ಚೆಂದರೆ ಒಂದು ದಿನದವರೆಗೆ ಫ್ರಿಡ್ಜ್ ನಲ್ಲಿಟ್ಟು ಮರಳಿ ಬಿಸಿ ಮಾಡಿ ಸೇವನೆ ಮಾಡಬಹುದು. ಆದರೆ ವಾರದವರೆಗಿಟ್ಟು ಸೇವನೆ ಮಾಡುವುದರಿಂದ ಆಹಾರ ವಿಷಕಾರಿಯಾಗಿ ಪರಿಣಮಿಸಬಹುದು.
12 ರಿಂದ 14 ಗಂಟೆಯೊಳಗೆ ಫ್ರಿಡ್ಜ್ ನಲ್ಲಿ ಟ್ಟ ಆಹಾರ ಸೇವನೆ ಮಾಡದೇ ಇದ್ದರೆ ಹೊಟ್ಟೆ ನೋವು, ಫುಡ್ ಪಾಯ್ಸನ್, ವಾಂತಿ ಇತ್ಯಾದಿ ಸಮಸ್ಯೆ ಕಂಡುಬರಬಹುದು. ಇನ್ನು ಕೆಲವರಿಗೆ ಅಸಿಡಿಟಿ ಸಮಸ್ಯೆಯಾಗಬಹುದು. ಬೇಳೆ ಕಾಳುಗಳಾಗಿದ್ದಲ್ಲಿ 2 ದಿನ ಇಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚುಇಟ್ಟು ತಿಂದರೆ ಅದರಲ್ಲಿರುವ ಪೋಷಕಾಂಶಗಳೂ ನಷ್ಟವಾಗಿರುತ್ತದೆ.