ಬೆಂಗಳೂರು: ಹೆಚ್ಚಿನವರಿಗೆ ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕಾಣಬೇಕೆಂಬ ಬಯಕೆಯಿರುತ್ತದೆ. ಇದಕ್ಕಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಹಾಗಿದ್ದರೆ ತೂಕ ಇಳಿಕೆಗೆ ನಮ್ಮ ಆಹಾರದಲ್ಲಿ ಯಾವ ಬದಲಾವಣೆ ಮಾಡಬೇಕು ನೋಡೋಣ.
ತೂಕ ಇಳಿಕೆ ಮಾಡಬೇಕೆಂದು ಬಯಸುವವರು ಮುಖ್ಯವಾಗಿ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಕಾ ಬಿಟ್ಟಿ ತಿನ್ನುವುದು, ಜಿಡ್ಡು, ಫಾಸ್ಟ್ ಫುಡ್ ಗಳನ್ನು ಬೇಕಾಬಿಟ್ಟಿ ತಿನ್ನುತ್ತಿದ್ದರೆ ಅಥವಾ ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುತ್ತಿದ್ದರೆ ತೂಕ ಇಳಿಕೆ ಮಾಡಲು ಸಾಧ್ಯವಾಗದು.
ಒಂದು ವೇಳೆ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ಸಂಜೆ ವೇಳೆ ತಂಪು ಪಾನೀಯಗಳನ್ನು ಸೇವಿಸುವುದನ್ನು ಬಿಡಬೇಕು. ಇದರಲ್ಲಿರುವ ಕೃತಕ ಸಿಹಿಕಾರಕ ಮತ್ತು ಸೋಡಾ ಅಂಶ ದೇಹಕ್ಕೆ ಖಂಡಿತಾ ಒಳ್ಳೆಯದಲ್ಲ. ಅದೇ ರೀತಿ ಚೀಸ್, ಬೆಣ್ಣೆಯಂತಹ ಅಧಿಕ ಕೊಬ್ಬಿನಂಶವಿರುವ ವಸ್ತುಗಳನ್ನೂ ಸಂಜೆ ಸೇವಿಸಬಾರದು.
ಸಂಜೆ ಹೊತ್ತು ಸ್ವಲ್ಪ ಹಸಿವಾಗುತ್ತಿದೆ ಎಂದು ಬೇಕರಿ ವಸ್ತುಗಳನ್ನು ಸೇವಿಸಲು ಹೋಗಬೇಡಿ. ಪಾಸ್ತಾ, ಅಧಿಕ ಉಪ್ಪಿನಂಶವಿರುವ ವಸ್ತುಗಳು ಬೊಜ್ಜು ಹೆಚ್ಚು ಮಾಡುತ್ತದೆ. ತೂಕ ಇಳಿಕೆ ಮಾಡಬೇಕೆಂದಿದ್ದರೆ ಇಂತಹ ಆಹಾರ ವಸ್ತುಗಳನ್ನು ಸಂಜೆ ಸೇವಿಸದೇ ಇರುವುದು ಉತ್ತಮ.