ಬೆಂಗಳೂರು: ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಮೊಸರು ತಿನ್ನಬಾರದು. ಅದರಲ್ಲೂ ಈ ಖಾಯಿಲೆ ಇರುವವರು ರಾತ್ರಿ ಮೊಸರು ತಿನ್ನಲೇಬಾರದು ಎನ್ನುತ್ತಾರೆ. ಯಾವ ಖಾಯಿಲೆ ಇರುವವರಿಗೆ ಮೊಸರು ರಾತ್ರಿ ಸೇವನೆ ಮಾಡುವುದು ಒಳ್ಳೆಯದಲ್ಲ ನೋಡಿ.
ಮೊಸರಿನಲ್ಲಿ ಕ್ಯಾಲ್ಶಿಯಂ, ಪೋಸ್ಪರಸ್, ಖನಿಜಾಂಶಗಳು ಹೇರಳವಾಗಿದೆ. ಇದು ಆರೋಗ್ಯಕ್ಕೆ ಉತ್ತಮವೇ. ಹಗಲು ಹೊತ್ತಿನಲ್ಲಿ ಸೇವನೆ ಮಾಡುವುದರಿಂದ ಅದರ ಫಲಗಳು ನಿಮ್ಮ ಶರೀರಕ್ಕೆ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತದೆ. ಆದರೆ ಆಯುರ್ವೇದದ ಪ್ರಕಾರ ರಾತ್ರಿ ಮೊಸರು ಸೇವನೆ ಮಾಡುವುದು ಉತ್ತಮವಲ್ಲ.
ಮೊಸರು ಸೇವನೆ ಕಫ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಹೀಗಾಗಿ ಅಸ್ತಮಾ ಅಥವಾ ಶೀತ ಪ್ರಕೃತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಮೊಸರು ಸೇವನೆ ಮಾಡುವುದು ಯೋಗ್ಯವಲ್ಲ ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಡುತ್ತಾರೆ. ಯಾರಿಗೆ ಬೇಗನೇ ಶೀತವಾಗುತ್ತದೋ ಅವರು ರಾತ್ರಿ ಮೊಸರು ಸೇವಿಸಬಾರದು.
ಅದೇ ರೀತಿ ಸಂಧಿವಾತ ಇರುವವರೂ ರಾತ್ರಿ ವೇಳೆ ಮೊಸರು ಸೇವನೆ ಮಾಡುವುದು ಉತ್ತಮವಲ್ಲ. ಮೊಸರಿನಲ್ಲಿರುವ ಕ್ಯಾಲ್ಶಿಯಂ ಅಂಶ ಹಲ್ಲಿನ ಆರೋಗ್ಯಕ್ಕೆ ಉತ್ತಮ. ಆದರೆ ಇದನ್ನು ರಾತ್ರಿ ವೇಳೆ ಸೇವಿಸುವುದರಿಂದ ಪ್ರಯೋಜನ ಸಿಗದು. ಹೀಗಾಗಿ ಈ ಎರಡು ಸಮಸ್ಯೆ ಇರುವವರು ರಾತ್ರಿ ಮೊಸರು ಸೇವಿಸಬೇಡಿ.