ಬೆಂಗಳೂರು: ಮೊನ್ನೆಯಷ್ಟೇ ತಿರುಪತಿ ಲಡ್ಡಿಗೆ ನಕಲಿ ತುಪ್ಪ ಬಳಕೆಯಾದ ಸುದ್ದಿ ಬಂದ ಮೇಲಂತೂ ಎಲ್ಲರೂ ಈಗ ಮಾರುಕಟ್ಟೆಯಿಂದ ತುಪ್ಪ ಖರೀದಿ ಮಾಡಲು ಹಿಂದೇಟು ಹಾಕುವಂತಾಗಿದೆ. ಹಾಗಿದ್ದರೆ ನೀವು ತರುವ ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ ಇಲ್ಲಿ ನೋಡಿ.
ಪ್ಯಾಕೆಟ್ ಮೇಲೆ 100% ಶುದ್ಧ ತುಪ್ಪ ಎಂದು ನಮೂದಿಸುವ ತುಪ್ಪವೆಲ್ಲವೂ ಪರಿಶುದ್ಧವೇ ಆಗಿರಬೇಕೆಂದೇನಿಲ್ಲ. ಇದರಲ್ಲಿ ಕಲಬೆರಕೆಯಾಗಿರಬಹುದು. ಲಾಭ ಮಾಡಿಕೊಳ್ಳಲು ಕೆಲವು ಕಂಪನಿಗಳು ಸಸ್ಯ ಜನ್ಯ ಮತ್ತು ಪ್ರಾಣಿ ಜನ್ಯ ಕೊಬ್ಬು ಮಿಶ್ರಣ ಮಾಡುತ್ತವೆ. ಹೀಗಾಗಿ ಎಲ್ಲವೂ ಅಸಲಿ ತುಪ್ಪವೇ ಆಗಿರುವುದಿಲ್ಲ.
ಅದಕ್ಕಾಗಿ ಹೀಗೆ ಮಾಡಿ ಪರೀಕ್ಷೆ ಮಾಡಿ:
ಒಂದು ಚಮಚ ತುಪ್ಪವನ್ನು ತೆಗೆದು ಅಂಗೈಗೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಿ. ಆಗ ತುಪ್ಪ ಕರಗಿದರೆ ಅದು ಅಸಲಿ ಎಂದರ್ಥ.
ತುಪ್ಪಕ್ಕೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ಒಂದು ಬಾಟಲಿಗೆ ಹಾಕಿ ಚೆನ್ನಾಗಿ ಕುಲುಕಿದಾಗ ಬಣ್ಣ ಬದಲಿದರೆ ಅದು ನಕಲಿ ಎಂದರ್ಥ
ತುಪ್ಪವನ್ನು ಕಾಯಿಸಿ ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟರೆ ಅದರ ಮೇಲೆ ಎಣ್ಣೆಯ ಪದರ ಕಂಡುಬಂದರೆ ಅದು ಪರಿಶುದ್ಧವಲ್ಲ ಎಂದರ್ಥ
ಶುದ್ಧ ತುಪ್ಪ ಹರಳು ಹರಳಾಗಿರುತ್ತವೆ. ಮತ್ತು ಅದನ್ನು ಉಜ್ಜಿದರೆ ಕರಗಿ ನೀರಾಗುತ್ತದೆ.
ಅದೇ ರೀತಿ ಕೈಗೆ ಹಾಕಿಕೊಂಡು ಮೂಸಿ ನೋಡುವಾಗ ಪರಿಮಳ ಬಾರದೇ ಇದ್ದರೆ ಅದು ನಕಲಿ ತುಪ್ಪವೆಂದು ಹೇಳಬಹುದು.