Publish Date: Mon, 02 Mar 2020 (08:54 IST)
Updated Date: Mon, 02 Mar 2020 (16:57 IST)
ಬೆಂಗಳೂರು: ನನ್ನ ಪತಿ ಕೆಲಸದ ನಿಮಿತ್ತ ಸಾಕಷ್ಟು ಪ್ರವಾಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರ ಪಾಕೆಟ್ ನಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದನ್ನು ನೋಡಿದಾಗಿನಿಂದ ನನಗೆ ಅವರು ನನ್ನ ಹೊರತು ಬೇರೆಯವರೊಂದಿಗೆ ಸೆಕ್ಸ್ ಸಂಬಂಧ ಹೊಂದಿದ್ದಾರೇನೋ ಅಂತ ಅನುಮಾನ. ಇದನ್ನು ಹೇಗೆ ಬಗೆಹರಿಸಲಿ?
ಒಂದು ವೇಳೆ ನಿಮ್ಮ ಪತಿ ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದರೆ ಅಕಸ್ಮಾತ್ತಾಗಿ ಕಾಂಡೋಮ್ ಅವರ ಜೇಬಿನಲ್ಲಿ ಪತ್ತೆಯಾಗಿದ್ದಿರಬಹುದು. ಅಥವಾ ಒಂದು ವೇಳೆ ಅವರು ಬೇರೆ ಹುಡುಗಿಯೊಂದಿಗೆ ಸೆಕ್ಸ್ ಸಂಬಂಧ ಹೊಂದಿರಲೂ ಬಹುದು! ಅದೇನೇ ಇದ್ದರೂ ನೀವು ಅವರ ಬಳಿ ನಯವಾಗಿ ಕಾಂಡೋಮ್ ಯಾಕೆ ನಿಮ್ಮ ಜೇಬಿನಲ್ಲಿತ್ತು ಎಂದು ಕೇಳಿ ಅವರ ಉತ್ತರದ ಮೇಲೆ ನಿರ್ಧಾರ ಮಾಡಬಹುದು. ಆದರೆ ಆರಂಭದಲ್ಲೇ ತೀರಾ ಅನುಮಾನದ ದೃಷ್ಟಿಯಲ್ಲಿ, ಗದರಿ ಕೇಳಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗದು. ಅಥವಾ ನಿಮಗೆ ಕೇಳಲು ಸಾಧ‍್ಯವಾಗುತ್ತಿಲ್ಲ ಎಂದಾದರೆ ಅವರ ಸ್ನೇಹಿತರ ಮೂಲಕ ಕೇಳಿಸಿ ಅನುಮಾನ ಬಗೆಹರಿಸಿಕೊಳ್ಳಿ.