ಬೆಂಗಳೂರು: ನಾವು ಇತ್ತೀಚೆಗಷ್ಟೇ ಮದುವೆಯಾಗಿದ್ದೇವೆ. ನಮಗೆ ಸದ್ಯಕ್ಕೆ ಮಗು ಬೇಡ. ಹೀಗಾಗಿ ಕಾಂಡೋಮ್ ಬಳಸಿ ಪ್ರತಿನಿತ್ಯ ಸೇರುತ್ತೇವೆ. ಆದರೆ ಕಾಂಡೋಮ್ ಬಳಸಿದರೂ ಪ್ರತಿನಿತ್ಯ ಸೇರುವುದರಿಂದ ಗರ್ಭಿಣಿಯಾದರೆ ಎಂಬ ಭಯ.
ಕಾಂಡೋಮ್ ಅತ್ಯಂತ ಸುರಕ್ಷಿತ ಗರ್ಭನಿರೋಧಕ ಸಾಧನ. ಕಾಂಡೋಮ್ ಬಳಸಿದ ಮೇಲೆ ಗರ್ಭಿಣಿಯಾಗುವ ಅಪಾಯವಿಲ್ಲ. ಆದರೆ ಬಳಸುವ ಮೊದಲು ಅದು ಹರಿದುಹೋಗಿದೆಯೇ, ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಮಿಲನ ಕ್ರಿಯೆ ನಡೆಸುವಾಗ ಹರಿದು ವೀರ್ಯಾಣು ಚೆಲ್ಲಿದರೆ ಮಾತ್ರ ಗರ್ಭಿಣಿಯಾಗುವ ಅಪಾಯವಿದೆ. ಇಲ್ಲದೇ ಇದ್ದರೆ ಚಿಂತೆ ಬೇಕಿಲ್ಲ.