Publish Date: Tue, 17 Dec 2019 (09:10 IST)
Updated Date: Tue, 17 Dec 2019 (09:11 IST)
ಬೆಂಗಳೂರು: ನನ್ನ ಪತ್ನಿ ನೋಡಲು ಸುಂದರವಾಗಿದ್ದಾಳೆ. ಆದರೆ ಅವಳ ಜತೆ ನನಗೆ ಇದುವರೆಗೆ ಸರಿಯಾಗಿ ದೈಹಿಕವಾಗಿ ಸಂಪರ್ಕವೇರ್ಪಡಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಮಿಲನದ ವೇಳೆ ಕ್ಲೈಮ್ಯಾಕ್ಸ್ ಹಂತ ತಲುಪಿದಾಗ ಆಕೆ ಭಯದಿಂದ ಕಿರುಚುತ್ತಾಳೆ. ನನ್ನ ಬಯಕೆ ಪೂರ್ತಿಗೊಳಿಸಲು ಬಿಡಲ್ಲ. ಇದಕ್ಕೆ ಪರಿಹಾರವೇನು?
ಬಹುಶಃ ನಿಮ್ಮ ಪತ್ನಿಗೆ ಮಿಲನದ ಭಯವಿರಬಹುದು. ಕೆಲವು ಮಹಿಳೆಯರಿಗೆ ಮಿಲನದ ಸಂದರ್ಭದಲ್ಲಿ ವಿಪರೀತ ನೋವಾಗುತ್ತದೆ ಎಂಬಿತ್ಯಾದಿ ತಪ್ಪು ಕಲ್ಪನೆಗಳಿರುತ್ತವೆ. ಅಥವಾ ಗರ್ಭಿಣಿಯರಾದರೆ, ಹೆರಿಗೆ ನೋವು ತಡೆದುಕೊಳ್ಳಲಾರೆವು ಎಂಬ ಭಯದಿಂದ ಈ ರೀತಿ ಮಾಡುತ್ತಿರಬಹುದು. ಇದು ಒಂದು ರೀತಿಯ ಮಾನಸಿಕ ಸಮಸ್ಯೆ. ಇದಕ್ಕೆ ತಕ್ಕ ಸಮಾಲೋಚಕರನ್ನು ಭೇಟಿಯಾಗಿ ಪತ್ನಿಗೆ ತಿಳಿ ಹೇಳಿಸುವುದು ಉತ್ತಮ.