Publish Date: Mon, 25 Nov 2019 (09:06 IST)
Updated Date: Mon, 25 Nov 2019 (09:08 IST)
ಬೆಂಗಳೂರು: ನಾನು ಈಗ ವಿವಾಹಿತೆ. ಆದರೆ ಹಳೆಯ ಬಾಯ್ ಫ್ರೆಂಡ್ ಮೆಸೇಜ್ ಮಾಡಿ ಆಗಾಗ ಬೆದರಿಕೆ ಹಾಕುತ್ತಿರುತ್ತಾನೆ. ಇದರಿಂದ ನನ್ನ ಮದುವೆ ಜೀವನ ಹಾಳಾದರೆ ಎಂಬ ಭಯ. ಏನು ಮಾಡಲಿ?
ಎಲ್ಲರಿಗೂ ಮದುವೆಗಿಂತ ಮೊದಲು ಅವರದ್ದೇ ಆದ ಹಳೆಯ ಜೀವನ, ಕತೆಗಳು ಇದ್ದೇ ಇರುತ್ತವೆ. ಒಂದು ವೇಳೆ ಆತ ನಿಮ್ಮ ಎಚ್ಚರಿಕೆಗೆ ಬಗ್ಗದೇ ಇದ್ದರೆ ನಿಮ್ಮ ಗಂಡನ ಬಳಿ ಮುಕ್ತವಾಗಿ ಈ ವಿಚಾರ ಹೇಳಿಕೊಳ್ಳಬೇಕಾಗುತ್ತದೆ. ಅಥವಾ ನಿಮ್ಮ ಪೋಷಕರ ಸಹಾಯ ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಎದುರಿಗೆ ಬರುವ ಯಾವುದೇ ಸವಾಲುಗಳು, ಸಮಸ್ಯೆಗಳನ್ನು ಎದುರಿಸಲು ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗುತ್ತದೆ.
ಇನ್ನೊಂದು ಮುಖ್ಯ ವಿಚಾರವೆಂದರೆ ಆತನ ಸಂದೇಶಗಳಿಗೆ ಸೊಪ್ಪು ಹಾಕಲು ಹೋಗಬೇಡಿ. ಮೌನವೇ ಎಲ್ಲದಕ್ಕೂ ಉತ್ತರವಾಗಲಿ.